ಕುಶಾಲನಗರ, ಜ. 24: ಕುಶಾಲನಗರ ಪ.ಪಂ. ಕಛೇರಿ ಮುಂಭಾಗದ ಚರಂಡಿಯಲ್ಲಿ ಶೌಚಾಲಯ ತ್ಯಾಜ್ಯ ಹರಿದ ಹಿನೆÀ್ನಲೆಯಲ್ಲಿ ಇಡೀ ಪ್ರದೇಶ ವಾಸನಾಮಯವಾದ ದೃಶ್ಯ ಗುರುವಾರ ಗೋಚರಿಸಿತು. ಪಟ್ಟಣದ ಮೇಲ್ಭಾಗದಿಂದ ಕೆಲವು ವಸತಿ ಗೃಹಗಳು, ಹೊಟೇಲ್ ಮತ್ತಿತರ ಕಟ್ಟಡಗಳಿಂದ ಚರಂಡಿ ಮೂಲಕ ಶೌಚ ಹರಿಸಿದ ಹಿನೆÀ್ನಲೆಯಲ್ಲಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪಂಚಾಯಿ ಸಿಬ್ಬಂದಿಗಳು ಚರಂಡಿಯಲ್ಲಿ ಡಿಡಿಟಿ ಮತ್ತಿತರ ರಾಸಾಯನಿಕಗಳನ್ನು ಹಾಕುವ ಮೂಲಕ ವಾಸನೆಯನ್ನು ಹೋಗಲಾಡಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಶೌಚ ತ್ಯಾಜ್ಯಗಳನ್ನು ಚರಂಡಿಗೆ ಬಿಡುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.