ಮಡಿಕೇರಿ, ಜ. 24: ಮಂಗಳೂರು ವಿಶ್ವವಿದ್ಯಾನಿಲಯದ ಕಳೆದ 2018ನೇ ಸಾಲಿನ ಅಂತಿಮ ಬಿಸಿಎ ಪರೀಕ್ಷೆಯಲ್ಲಿ ಎಸ್ಡಿಎಂ ಕಾಲೇಜ್ ಆಫ್ ಬಿಸ್ನೆಸ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ವಿದ್ಯಾರ್ಥಿನಿ ಕೆ.ಎಂ. ನಿಶ್ಚಿತಾ ಶೇ. 94.78 ಅಂಕ ಪಡೆದು ವಿಶ್ವವಿದ್ಯಾನಿಲಯಕ್ಕೆ 2ನೇ ರ್ಯಾಂಕ್ ಪಡೆದಿದ್ದಾಳೆ. ಈಕೆ ತಾಳತ್ಮನೆ ನಿವಾಸಿ ಕೆ.ಎಸ್. ಮಹೇಶ್ ಮತ್ತು ಭವಾನಿ ದಂಪತಿಯ ಪುತ್ರಿ.