ಅಧ್ಯಯನ ಕೇಂದ್ರ ಸ್ಥಾಪನೆ

ಮಡಿಕೇರಿ, ಜ. 24: ಬೆಂಗಳೂರು ಕೊಡವ ಸಮಾಜದ ಸಹಕಾರದೊಂದಿಗೆ ಬೆಂಗಳೂರಿನ ಇಂದಿರಾನಗರದಲ್ಲಿರುವ ಕಾವೇರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಸಮಾಜ ಶಿಕ್ಷಣ ಸಮಿತಿಯ ಮೂಲಕ ಬುಡಕಟ್ಟು ಸಂಸ್ಕøತಿ ಹಾಗೂ ಭಾಷಾ ಅಧ್ಯಯನ ಕೇಂದ್ರ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತಿದೆ. ಕೊಡಗಿನಲ್ಲಿರುವ ಬೇರೆ ಬೇರೆ ಬುಡಕಟ್ಟು ಸಂಸ್ಕøತಿಯನ್ನು ಕಲಿಸುವದು ಈ ಕೇಂದ್ರದ ಉದ್ದೇಶವಾಗಿದ್ದು, ಮೊದಲಿಗೆ ಕೊಡವ ಸಂಸ್ಕøತಿ ಕುರಿತಾಗಿ ತರಬೇತಿ ನೀಡಲಾಗುವದು ಎಂದು ಸಮಿತಿಯ ಗೌರವ ಕಾರ್ಯದರ್ಶಿ ಮೇಜರ್ ಮುಂಡಂಡ ಎ. ಮಾಚಯ್ಯ (ನಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕೇಂದ್ರದ ಉದ್ಘಾಟನಾ ಸಮಾರಂಭ ತಾ. 27 ರಂದು ಕಾವೇರಿ ಶಾಲೆಯಲ್ಲಿ ನಡೆಯಲಿದ್ದು, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಉದ್ಘಾಟಿಸಲಿದ್ದಾರೆ. ಸಮಾಜದ ಮಾಜಿ ಅಧ್ಯಕ್ಷ ಕೋಡಿರ ಎಂ. ಅಪ್ಪಯ್ಯ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಸಮಾಜದ ಮಾಜಿ ಕಾರ್ಯದರ್ಶಿ ಚೆನ್ನಪಂಡ ಕೆ. ರವಿಸುಬ್ಬಯ್ಯ, ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಕಂಡ್ರತಂಡ ಎಂ. ಕಾವೇರಪ್ಪ ಪಾಲ್ಗೊಳ್ಳಲಿದ್ದಾರೆ.