ಮಡಿಕೇರಿ, ಜ. 24 : ಕುಂಜಿಲದ ಪೈಯ್‍ನರಿ ಜಮಾಅತ್‍ನ, ಕುಂಜಿಲ ಪೈಯ್‍ನರಿ ರಿಲೀಫ್ ಫಂಡ್ ವತಿಯಿಂದ ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಸಮಾರಂಭ ತಾ. 26 ರಂದು ಕುಂಜಿಲದ ರೌಳತುಲ್ ಉಲೂಂ ಮದ್ರಸದ ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ಅನಾಥ ಮತ್ತು ಬಡ ಹೆಣ್ಣು ಮಕ್ಕಳ ವಿವಾಹ ಸಮಾರಂಭದ ಕುರಿತು ಮಾಹಿತಿ ನೀಡಿದರು. ಶನಿವಾರ ಲುಹ್‍ರ್ ನಮಾಜಿನ ನಂತರ 11ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ಫಝಲ್ ಕೊಯಮ್ಮ ಅಲ್‍ಬುಖಾರಿ ಹಾಗೂ ಕುಂಜಿಲದ ಅಸಯ್ಯಿದ್ ಮುಹ್ಸಿನ್ ಸೈದಲವಿ ಕೋಯಾ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯಲಿದೆ.

ಕುಂಜಿಲದ ಫೈಯ್‍ನರಿ ಸುನ್ನೀ ಮುಸ್ಲಿಂ ಜಮಾಅತ್‍ನ ಅಧ್ಯಕ್ಷ ಅದವೇಲ್ ಮುಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಖಿರ್ ಬಾಖವಿ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಇಬ್ಬರು ಬಡ ಹೆಣ್ಣು ಮಕ್ಕಳು ಕಂಕಣ ಭಾಗ್ಯ ಪಡೆಯಲಿದ್ದಾರೆ ಎಂದರು.

ಫಂಡ್‍ನ ಕಾರ್ಯದರ್ಶಿ ಹಾರಿಸ್ ಝೈನಿ, ಕೋಶಾಧಿಕಾರಿ ಫೈಜಲ್ ಜೌಹರಿ, ಕಂಡಂಡ ಅಬ್ದುಲ್ ನಾಸೀರ್ ಹಾಗೂ ಸಹ ಕಾರ್ಯದರ್ಶಿ ಸಿರಾಜ್ ಉಪಸ್ಥಿತರಿದ್ದರು.