ಚೆಟ್ಟಳ್ಳಿ, ಜ. 24: ಇಲ್ಲಿನ ಕೆ.ಕೆ.ಎಫ್.ಸಿ ಫುಟ್ಬಾಲ್ ಕ್ಲಬ್ ಆರನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟಕ್ಕೆ ಪ್ರೌಢಶಾಲಾ ಮೈದಾನದಲ್ಲಿ ಚೆಟ್ಟಳ್ಳಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೇರಿಯನ ಜಯಾನಂದ ಧ್ವಜಾರೋಹಣ ನೆರವೇರಿಸುವದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆ ಪುಟ್ಟ ಜಿಲ್ಲೆಯಾಗಿದ್ದರೂ, ದೇಶ, ವಿದೇಶಕ್ಕೆ ಕ್ರೀಡೆ ಇನ್ನಿತರ ಎಲ್ಲಾ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕಾಗಿ ಕರೆ ನೀಡಿದರು.
ಪಂದ್ಯಾಟದ ಉದ್ಘಾಟನೆ ಮಾಡಿ ಮಾತನಾಡಿದ ಬಿಜೆಪಿ ಯುವ ನಾಯಕ ತೇಲಪಂಡ ಶಿವಕುಮಾರ್ ನಾಣಯ್ಯ, ಕೆ.ಕೆ.ಎಫ್.ಸಿ. ಫುಟ್ಬಾಲ್ ಕ್ಲಬ್ ಕಳೆದ ಆರು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್‍ನ ಅಧ್ಯಕ್ಷ ಮೊಹಮ್ಮದ್ ರಫಿ (ಕುಟ್ಟಿ) ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸುನಿತಾ ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷೆ ವತ್ಸಲ, ಕ್ಲಬ್‍ನ ಗೌರವಾಧ್ಯಕ್ಷ ರೈಮನ್ ಸರವೋ, ಕಾರ್ಯದರ್ಶಿ ಜುಬೈರ್, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ವಿನೋದ್, ಲತೀಫ್ ಮತ್ತಿತರರು ಇದ್ದರು.
ಉದ್ಘಾಟನೆ ಪಂದ್ಯಾಟವು ರಂಗ ಸಮುದ್ರ ಹಾಗೂ ನೇತಾಜಿ ಕೊಡಗರಹಳ್ಳಿ ನಡುವೆ ನಡೆಯಿತು.
ರಂಗ ಸಮುದ್ರ ತಂಡವು ಪೆನಾಲ್ಟಿ ಶೂಟೌಟ್‍ನಲ್ಲಿ 4-3 ಗೋಲುಗಳ ಅಂತರದಿಂದ ಗೆಲವು ಸಾಧಿಸಿತು.