ಕುಶಾಲನಗರ, ಜ. 24: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪಾಲುದಾರ ಸದಸ್ಯರುಗಳ ಪೈಕಿ ಕೃಷಿಯಲ್ಲಿ ನಿರತರಾಗಿರುವ ಸದಸ್ಯರುಗಳನ್ನು ಗುರುತಿಸಿ ಅವರಿಗೆ ಸಮಗ್ರ ಕೃಷಿಯಲ್ಲಿ ಇನ್ನಷ್ಟು ಮಾಹಿತಿ ಯನ್ನು ನೀಡುವ ಉದ್ದೇಶದಿಂದ 3 ದಿನಗಳ ಕಾಲ ರಾಜ್ಯಮಟ್ಟದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಅಧಿಕಾರಿ ಗೀತಾ ಹಾಗೂ ಶ್ರೀ ಕ್ಷೇ.ಧ.ಗ್ರಾ. ಯೋ. ವಲಯ ಮೇಲ್ವಿಚಾರಕ ಕೆ. ಹರೀಶ್ ನೇತೃತ್ವದಲ್ಲಿ 50 ಮಂದಿ ಕೃಷಿಕರು ಮೈಸೂರು, ಬೆಂಗಳೂರು, ಕೋಲಾರ ಹಾಗೂ ಶಿವಮೊಗ್ಗ ವ್ಯಾಪ್ತಿಯ ಪ್ರದೇಶಗಳಿಗೆ ತಂಡ ಪ್ರವಾಸ ತೆರಳಿದೆ.