ಗುಡ್ಡೆಹೊಸೂರು, ಜ. 24: ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಅಂತರ್ ಶಾಲಾ ಕಾಲೇಜು ಕರಾಟೆ ಚಾಂಪಿಯನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ನ್ಯಾಷನಲ್ ಮಾರ್ಷಲ್ ಆಟ್ಸ್ ಮತ್ತು ಯೋಗ ಸಂಸ್ಥೆಯ ಕರಾಟೆ ಪಟುಗಳಾದ ಹೊಸ ಪಟ್ಟಣ ಗ್ರಾಮದ ಪರ್ಲಕೋಟಿ ಲವ ಚಂಗಪ್ಪ ಮತ್ತು ಪರ್ಲಕೋಟಿ ವಿಕ್ರ ಅವರು ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಪದಕ ಪಡೆದಿದ್ದಾರೆ. ತರಬೇತುದಾರರಾಗಿ ಸ್ವಾಮಿ ಕಾರ್ಯನಿರ್ವಹಿಸಿದ್ದಾರೆ. ಸ್ಪರ್ಧೆಯನ್ನು ಮಂಗಳೂರಿನ ಇನ್ಸ್‍ಟಿಟ್ಯೂಟ್ ಆಫ್ ಕರಾಟೆ ಮತ್ತು ಆಲಾಡ್ ಆಟ್ಸ್ ಸಂಸ್ಥೆಯವರು ಆಯೋಜನೆ ಮಾಡಿದ್ದರು.