ಮಡಿಕೇರಿ, ಜ. 24: ಬೆಂಗಳೂರು ಶಾರದ ಪ್ರತಿಷ್ಠಾನ, ಮೇಕೇರಿ ಈಶ್ವರಿ ಸಾಹಿತ್ಯ ಬಳಗ ಇವರ ಸಹಯೋಗದಲ್ಲಿ ತಾ. 27 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಗಾಯನಗೋಷ್ಠಿ ಕಾರ್ಯಕ್ರಮ ನಡೆಯಲಿದೆ.
ಕಗ್ಗೋಡ್ಲು ನಿವೃತ್ತ ಶಿಕ್ಷಕಿ ಭಾಗೀರಥಿ ಹುಲಿತಾಳ ಅವರು ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆಯ ಕವಿಯತ್ರಿ ರಾಧಿಕಾ ಕಾಳಪ್ಪ, ಅಂತರರಾಷ್ಟ್ರೀಯ ಸಾಹಿತಿಗಳು ಹಾಗೂ ವಿಮರ್ಶಕ ಡಾ. ಹುಲಿವಾಹನ ನರಸಿಂಹ ಸ್ವಾಮಿ ಇತರರು ಪಾಲ್ಗೊಳ್ಳಲಿದ್ದಾರೆ.