ಗೋಣಿಕೊಪ್ಪ ವರದಿ, ಜ. 22: ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಂತೆ ಮಕ್ಕಳಿಗೆ ಅನುಕೂಲವಾಗುವಂತೆ ಗೋಣಿಕೊಪ್ಪ ರೋಟರಿ ಸಂಸ್ಥೆ ಹಾಗೂ ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ 2 ನೇ ವಿಭಾಗದ ಅಂಗನವಾಡಿ ಕೇಂದ್ರಕ್ಕೆ ಆಶಾಸ್ಪೂರ್ತಿ ಕಾರ್ಯಕ್ರಮದಡಿಯಲ್ಲಿ ಹಲವು ವಸ್ತುಗಳನ್ನು ನೀಡಲಾಯಿತು. ಅಂಗನವಾಡಿ ಮಕ್ಕಳಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡುವ ಉದ್ದೇಶದಿಂದ ನೆಲಹಾಸು ಮ್ಯಾಟ್, ಹಾಗೂ ಕುಡಿಯುವ ನೀರಿನ ಫಿಲ್ಟರ್, ಮಕ್ಕಳ ಆಟಿಕೆ, ಕುರ್ಚಿ, ಟೇಬಲ್ ವಸ್ತುಗಳನ್ನು ನೀಡಲಾಯಿತು.

ಗೋಣಿಕೊಪ್ಪ ರೋಟರಿ ಸಂಸ್ಥೆ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ, ಮಾಜಿ ಅಧ್ಯಕ್ಷರುಗಳಾದ ಕೊಕ್ಕಂಡ ಕಾವೇರಪ್ಪ, ಎಂ. ಜಿ. ಮೋಹನ್, ಸದಸ್ಯರುಗಳಾದ ಪ್ರಮೋದ್ ಕಾಮತ್, ನರೇನ್, ಶೇರಿಂಗ್ ಅಬಾಂಡೆನ್ಸ್ ಸಂಸ್ಥೆ ಪ್ರಮುಖರುಗಳಾದ ಪಟ್ಟು ಉತ್ತಯ್ಯ, ರಬೀನಾ, ಜೀವನ್ ವಿತರಣೆ ಮಾಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮಂಜುರೈ, ಮುರುಗ, ಮಂಜುಳಾ ಪಾಲ್ಗೊಂಡಿದ್ದರು.