ಸೋಮವಾರಪೇಟೆ, ಜ. 22: ಇಲ್ಲಿನ ಓಎಲ್‍ವಿ ಕಾನ್ವೆಂಟ್‍ನಲ್ಲಿ ಗೆಳೆಯರ ಬಳಗದ ವತಿಯಿಂದ ಸ್ವರ ಸಂಭ್ರಮ 2019 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಗೆಳೆಯರ ಬಳಗದ ಶೇಖರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸೂಕ್ತ ವೇದಿಕೆಯ ಕೊರತೆಯಿಂದ ಹಲವಷ್ಟು ಪ್ರತಿಭೆಗಳು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಳೆದ 7 ವರ್ಷಗಳ ಹಿಂದೆ ಸಮಾನ ಮನಸ್ಕರು ಒಂದೆಡೆ ಸೇರಿ ಗೆಳೆಯರ ಬಳಗ ಸಂಘವನ್ನು ಹುಟ್ಟುಹಾಕುವ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಇದರಿಂದಾಗಿ ಕೊಡಗಿನ ಉದಯೋನ್ಮುಖ ಗಾಯಕ, ಗಾಯಕಿ ಯರಿಗೆ ಹಾಗೂ ನೃತ್ಯಕ್ಕೆ ಅವಕಾಶ ಕಲ್ಪಿಸಿ, ಅವರಿಗೆ ಬಹುಮಾನಗಳನ್ನು ವಿತರಿಸುತ್ತಿರುವದಾಗಿ ತಿಳಿಸಿದರು.
ವೇದಿಕೆಯಲ್ಲಿ ಬಳಗದ ಎಚ್.ಕೆ. ಜವರಯ್ಯ, ಆರ್, ದಿವಾಕರ್, ಬಿಆರ್‍ಪಿ ವಿಜಯಕುಮಾರ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಸುಮೇಶ್ ಹಾಗೂ ಪರಮೇಶ್ ಉಪಸ್ಥಿತರಿದ್ದರು.