ಮಡಿಕೇರಿ, ಜ. 22 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಹಾಗೂ ನಿಜಶರಣ ಅಂಬಿಗರ ಚೌಡಯ್ಯರ ಜಯಂತಿಯನ್ನು ಆಚರಿಸಲಾಯಿತು.
ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಮಾತನಾಡಿದ ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್ ಶರಣರ ಸಂದೇಶಗಳು ಸಮಾಜದ ಬದುಕಿಗಾಗಿ ಸದಾ ದಾರಿದೀಪ ಎಂದರು. ಶರಣರ ಸಂದೇಶಗಳನ್ನು ಸ್ಮರಿಸುವಂತಾಗ ಬೇಕು. 800 ವರ್ಷಗಳ ಹಿಂದೆಯೇ ಸಮಾಜ ಸುಧಾರಕ ಸಂದೇಶಗಳನ್ನು ನೀಡಿ ಸಮಾಜದ ಒಳಿತಿಗಾಗಿ ಶರಣರು ಶ್ರಮಿಸಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ ಶರಣರ ಚಳುವಳಿಯಿಂದಾಗಿ ಸಾಮಾಜಿಕ ಸಮಾನತೆ ಪರಿಕಲ್ಪನೆ ಉಂಟಾಯಿತು. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಅವರು ಸಮಾಜದ ಒಳಿತಿಗಾಗಿ ಶರಣರು ಶ್ರಮಿಸಿದ್ದಾರೆ. ಸಾಹಿತ್ಯ ಭಂಡಾರದ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಮಾತನಾಡಿ ಶರಣರ ಸಂದೇಶಗಳು, ವಚನಗಳು ಸಾರ್ವಕಾಲಿಕವಾಗಿದ್ದು, ಸಮಾಜದೊಳಗಿನ ಅಸಮಾನತೆ ಯನ್ನು ತೊಡೆದುಹಾಕುವಲ್ಲಿ ಶ್ರಮಿಸಿದರು ಎಂದು ನುಡಿದರು.
ಕರ್ನಾಟಕ ಭೋವಿ ಮಹಾಸಭಾದ ಜಿಲ್ಲಾ ಅಧ್ಯಕ್ಷ ಡಿ.ಸುಜಿತ್ ಮಾತನಾಡಿ ಸಮಾಜದ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತುಂಬಾ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸುವಂತಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ಕರ್ನಾಟಕ ಭೋವಿ ಮಹಾಸಭಾದ ಗೌರವ ಅಧ್ಯಕ್ಷ ಆರ್.ಸಿ. ವಿಜಯ್, ನಾನಾ ಇಲಾಖೆ ಅಧಿಕಾರಿಗಳು ಇದ್ದರು.