*ಸಿದ್ದಾಪುರ, ಜ. 22: ಆಭ್ಯತ್‍ಮಂಗಲ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನೆಲ್ಲಿಹುದಿಕೇರಿಯ ಠೇವಣಿ ಸಂಗ್ರಹ ಅಭಿಯಾನ ಕಾರ್ಯಕ್ರಮವು ತಾ.27 ರಂದು ಬೆಳಿಗ್ಗೆ 10.30 ಗಂಟೆಗೆ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಉದ್ಘಾಟನೆಯನ್ನು ಹಿರಿಯ ಸಹಕಾರಿ ತೋಟಂಬೈಲ್ ತಿಮ್ಮಯ್ಯ ನೆರೆವೇರಿಸಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಲಚಂಡ ಅಚ್ಚಯ್ಯ, ಮುಖ್ಯ ಅತಿಥಿಗಳಾಗಿ ಕರ್ಣಯ್ಯನ ವಿಶ್ವನಾಥ, ಮೇಜರ್ ಜನರಲ್ (ನಿವೃತ್ತ) ಕಾಳೇಯಂಗಡ ಚಂಗಪ್ಪ ಕಾರ್ಯಪ್ಪ, ಕೊಳೆಂಬೆ ಶಿವಪ್ಪ,ಪೀಟರ್ ಮ್ಯಾನ್ಯುವೆಲ್, ಅಂತೋಣಿ ಜೋಸೆಫ್ ಹಾಗೂ ಕೆ.ಬಿ. ಹಸೈನಾರ್ ಭಾಗವಹಿಸಲಿದ್ದಾರೆ.