ನಾಪೆÇೀಕ್ಲು, ಜ. 22: ಎಮ್ಮೆಮಾಡು ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಫ್ ವತಿಯಿಂದ ನೀಡುತ್ತಿರುವ ಪೂರ್ವಭಾವಿ ಪರೀಕ್ಷಾ ತರಬೇತಿಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ಎಸ್‍ಎಸ್‍ಎಫ್ ಸಂಘಟನೆಯ ಸದಸ್ಯರ ನಡುವೆ ನಡೆದ ಘರ್ಷಣೆಯಲ್ಲಿ ಶೌಕಲ್ ಆಲಿ, ಉಸ್ತಾದ್ ಜಕ್ರೀಯಾ ಜೂರಿ ಎಂಬ ಈರ್ವರು ಗಾಯಗೊಂಡು ಆಸ್ಪತ್ರೆ ಸೇರಿದ ಬಗ್ಗೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಎಸ್‍ಎಫ್ ಜಿಲ್ಲಾ ಸಮಿತಿ ಸದಸ್ಯ ಸೌಕತ್ ಅಲಿ ಸಿ.ಎ. ಮತ್ತು ಎಮ್ಮೆಮಾಡು ಗ್ರಾಮದ ಎಂ.ಎಸ್. ಮೂಸ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ 8/19 ಕಲಂ 143, 144, 323, 324, 506 ಹಾಗೂ 149ರಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಸ, ಜಲೀಲ್, ಜವಾರ್, ನೌಶಾದ್, ಸೌಕತ್, ಆಲಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ ಪೆÇಲೀಸರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.