ಕುಶಾಲನಗರ, ಜ. 21: ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನಲೆಯಲ್ಲಿ ಕುಶಾಲನಗರ ವಿವಿಧ ಸಂಘಸಂಸ್ಥೆಗಳಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು. ಗೌರವಾರ್ಥವಾಗಿ ವರ್ತಕರು ಸಂಜೆ 4 ರಿಂದ 6 ಗಂಟೆ ತನಕ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಕ್ತಾದಿಗಳು ಕುಶಾಲನಗರ, ಜ. 21: ಶಿವಕುಮಾರ ಸ್ವಾಮೀಜಿ ನಿಧನದ ಹಿನ್ನಲೆಯಲ್ಲಿ ಕುಶಾಲನಗರ ವಿವಿಧ ಸಂಘಸಂಸ್ಥೆಗಳಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು. ಗೌರವಾರ್ಥವಾಗಿ ವರ್ತಕರು ಸಂಜೆ 4 ರಿಂದ 6 ಗಂಟೆ ತನಕ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಲಾಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಭಕ್ತಾದಿಗಳು ಸೂಚಿಸಿದರು.

ಕಾವೇರಿ ಸ್ವಚ್ಛತಾ ಆಂದೋಲನ ಮತ್ತು ಮಾತೆ ಕಾವೇರಿ ಆರತಿ ಬಳಗದ ಪ್ರಮುಖರು ಶ್ರೀಗಳ ನಿಧನದ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ಸೇರಿದ ಬಳಗದ ಸದಸ್ಯರು ಸಂತಾಪ ಸೂಚಿಸಿ ಒಂದು ನಿಮಿಷ ಕಾಲ ಮೌನ ಪ್ರಾರ್ಥನೆ ಸಲ್ಲಿಸಿದರು.