ಮಡಿಕೇರಿ, ಜ. 21: ‘ನಡೆದಾಡುವ ದೇವರು’ ಎಂದೇ ಹೆಸರುವಾಸಿಯಾದ ತುಮಕೂರು ಶ್ರಿ ಸಿದ್ಧಗಂಗಾ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿಯವರು ಇಂದು ಶಿವೈಕ್ಯರಾದರುತ್ರಿವಿಧ ದಾಸೋಹಿ, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಂತರಾಗಿ 111 ವರ್ಷಗಳ ಯತಿ ಜೀವನ ಯಾನ ಪೂರೈಸಿದ್ದು, ಶ್ರೀಗಳನ್ನು ಕಾಡುತ್ತಿದ್ದ ಅನಾರೋಗ್ಯ ಇಂದು ಅವರನ್ನು ಇಹಲೋಕ ಯಾತ್ರೆಯಿಂದ ದೂರ ಸರಿಸಿತು. ಬೆ. 11.44 ರ ಸುಮಾರಿಗೆ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಮಂಗಳವಾರ 3 ಗಂಟೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ 4.30ರ ಸುಮಾರಿಗೆ ಶ್ರೀಗಳ ಕ್ರಿಯಾ ಸಮಾಧಿ ನಡೆಯಲಿದೆ.ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಮತ್ತು ಗಂಗಮ್ಮನವರಿಗೆ ಏಪ್ರಿಲ್ 1, 1907ರಲ್ಲಿ 13ನೇ ಮಗುವಾಗಿ ಅವರು ಜನಿಸಿದರು.

ಮಠದ ಆವರಣದಲ್ಲಿರುವ ಗೋಶಾಲಾ ವೇದಿಕೆಯಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದ್ದು, ವೇದಿಕೆ ಸುತ್ತಮುತ್ತ ಸುಮಾರು ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಭದ್ರತೆ ಮತ್ತು ಸುಗಮ ಸಂಚಾರಕ್ಕಾಗಿ ಮಠದ ಸುತ್ತ ಒಟ್ಟು 3,500 ಪೊಲೀಸರನ್ನು ನಿಯೋಜಿಸಲಾಗಿದೆ. 30 ಕೆಎಸ್‍ಆರ್‍ಪಿ ತುಕಡಿ, 26 ಸಶಸ್ತ್ರ ಪೊಲೀಸ್ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ (ಮೊದಲ ಪುಟದಿಂದ) ಎಂದು ಕೇಂದ್ರ ವಲಯ ಐಜಿಪಿ ಬಿ. ದಯಾನಂದ್ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ, ಭಕ್ತರಿಗೆ ಶ್ರೀಗಳ ಲಿಂಗಶರೀರದ ಅಂತಿಮ ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ, ಭಕ್ತರಿಗೆ ಶ್ರೀಗಳ ಲಿಂಗಶರೀರದ ಅಂತಿಮ ದಶಕಗಳಿಂದ ವಿದ್ಯಾದಾನ ಮಾಡುತ್ತಾ, ಹಸಿದವರಿಗೆ ಅನ್ನ ನೀಡುತ್ತಾ, ಬಡವರಿಗೆ ಸುಲಭದ ದರದಲ್ಲಿ ಆರೋಗ್ಯ ನೀಡುತ್ತಾ ತ್ರಿವಿಧÀ ದಾಸೋಹಿಗಳು ಎನಿಸಿಕೊಂಡರು ಶ್ರೀಗಳು. ದಾಸೋಹಕ್ಕೆ ಇರುವದೇ ಸಿದ್ದಗಂಗೆ ಎಂಬಂತೆ ಮಠವನ್ನು ಬೆಳೆಸಿದರು.

ಶ್ರೀ ಶಿವಕುಮಾರ ಸ್ವಾಮೀಜಿ ಅವರು ಈ ಹಿಂದೆ ಕೊಡಗಿನ ವೀರಾಜಪೇಟೆಯ ಅರಮೇರಿ ಮಠಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರೊಂದಿಗೆ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ಹಾಗೂ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ(ದಿವಂಗತ) ಕೊಡಗಿನ ಆರ್. ಗುಂಡೂರಾವ್ ಅವರೊಂದಿ ಗಿನ ಸ್ವಾಮೀಜಿ ಅವರ ಗತಕಾಲದ ಚಿತ್ರಗಳನ್ನು ಪತ್ರಕರ್ತ ಅನಿಲ್ ಹೆಚ್.ಟಿ. “ಶಕ್ತಿ” ಗೆ ಒದಗಿಸಿದ್ದಾರೆ.

ಅಲ್ಲದೆ, ಕೊಡಗಿನ ಕಲಾ ಪರಿಣಿತÀ ಬಿ.ಆರ್ ಸತೀಶ್ ಅವರು ತಮ್ಮ ಕುಂಚದಲ್ಲಿ ಮೂಡಿಸಿದ ಸ್ವಾಮೀಜಿ ಅವರ ಕಲಾ ಚಿತ್ರವನ್ನೂ ಇಲ್ಲಿ ಪ್ರಕಟಿಸಲಾಗಿದೆ.