ಶನಿವಾರಸಂತೆ, ಜ. 20: ಸಮಾಜದಲ್ಲಿರುವ ಮೂಢನಂಬಿಕೆ ಹಾಗೂ ದುಶ್ಚಟಗಳು ದೂರವಾಗ ಬೇಕಾದರೆ ಧಾರ್ಮಿಕ ಮತ್ತು ಆಧ್ಯಾತ್ಮಿಕತೆಯ ಸಂಗಮವಾಗಬೇಕು ಎಂದು ಕೇರಳದ ಆಧ್ಯಾತ್ಮಿಕ ಗುರು ಸೈಯದ್ ಇಬ್ರಾಹಿಂ ಬಾತಿಷ ತಂಜಳ್ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆಯ ಎಸ್.ಕೆ.ಎಸ್.ಎಸ್.ಎಫ್. ಘಟಕದ ವತಿಯಿಂದ ನಡೆದ ಮಜ್ಲಿಸುನ್ನೂರು ವಾರ್ಷಿಕ ಸಮಾರೋಪ ಸಮಾರಂಭ ದಲ್ಲಿ ಅವರು ಉಪನ್ಯಾಸ ನೀಡಿದರು. ದೇಶದ ಬೆನ್ನೆಲುಬಾದ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಅಮೂಲ್ಯ ಸಮಯವನ್ನು ದೇಶದ ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯಯಿಸಬೇಕು. ಆಗ ದೇಶದಲ್ಲಿ ಶಾಂತಿ, ಸೌಹಾರ್ದತೆ ಮೂಡುತ್ತದೆ. ಈ ಸಂದೇಶ ಸಾರುವ ನಿಟ್ಟಿನಲ್ಲಿ ಯುವ ಜನಾಂಗ ಶ್ರಮಿಸಬೇಕು ಎಂದು ಕರೆ ನೀಡಿದರು. ಪ್ರಮುಖರಾದ ನೌಶಾದ್ ಫೈಝಿ, ಹಸೈನಾರ್ ಮುಸ್ಲಿಯಾರ್ ಆನೆಮಹಲ್, ಬಜೆಗುಂಡಿ ಯಾಕೂಬ್, ಇಕ್ಬಾಲ್ ಮುಸ್ಲಿಯಾರ್, ಸಿದ್ದೀಕ್ ಹಾಜಿ, ಅಬ್ದುಲ್ ರೆಹಮಾನ್, ಮಲ್ಲಳ್ಳಿ ಇಬ್ರಾಹಿಂ, ಬ್ಯಾಡಗೊಟ್ಟ ಉಸ್ಮಾನ್, ಕೊಡ್ಲಿಪೇಟೆ ನೌಫಲ್, ಝಹೀರ್ ನಿಝಾಮಿ ಮತ್ತಿತರರು ಉಪಸ್ಥಿತರಿದ್ದರು.