ವೀರಾಜಪೇಟೆ, ಜ. 20: ತಾ. 12 ಹಾಗೂ 13 ರಂದು ಮೈಸೂರಿನಲ್ಲಿ ನಡೆದ ಮುಕ್ತ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ವೀರಾಜಪೇಟೆಯ ಗೋಜೂ ರ್ಯೂ ಕರಾಟೆ ಶಾಲೆ ಕತ್ತಾ, ಕುಮಿತೆ, ಟೀಂ ಕತ್ತಾ ವಿಭಾಗದಲ್ಲಿ 31 ಚಿನ್ನದ ಪದಕ, 24 ಬೆಳ್ಳಿ ಹಾಗೂ 17 ಕಂಚಿನ ಪದಕಗಳನ್ನು ಪಡೆದು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ. ಕರಾಟೆ ಶಿಕ್ಷಕ ಸೆನ್‍ಸಾಯಿ ಎಂ.ಬಿ. ಚಂದ್ರನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.