ಮಡಿಕೇರಿ, ಜ. 20: ಕೋಕೇರಿ ಮಹಿಳಾ ಮಂಡಳಿಯ ಮಹಾಸಭೆ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಬಿದ್ದಂಡ ಪೂವಮ್ಮ ದೇವಯ್ಯ ಅವರ 20ನೇ ವರ್ಷದ ಪುಣ್ಯಸ್ಮರಣೆಯ ನೆನಪಿನಲ್ಲಿ ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ನೀಡುವ ಸಲುವಾಗಿ ಅವರ ಮಕ್ಕಳು ಪ್ರಾಯೋಜಿಸಿದ ರೋಲಿಂಗ್ ಟ್ರೋಫಿ, ಸರ್ಟಿಫಿಕೇಟು ಮತ್ತು ನಗದು ಪುರಸ್ಕಾರವನ್ನು 14 ವರ್ಷ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಚ್ಚಂಡ ಸುಮತಿ, ಕುಂಞಪ್ಪ (ತಾಮನೆ ಬೊಳ್ಳಂಡ) ಅವರಿಗೆ ನೀಡಲಾಯಿತು. ಚೇನಂಡ ಶಿಲ್ಪಾ ಸಂಪತ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿಯನ್ನು ಪೂವಮ್ಮ ಅವರ ಸೊಸೆಯಂದಿರಾದ ಮೀನಾ ಪಟ್ಟು ಮತ್ತು ಕೃತಿಕಾ ನಾಣಿ ವಿತರಿಸಿದರು.