ಚೆಟ್ಟಳ್ಳಿ, ಜ. 20: ಸೌತ್ ಕೂರ್ಗ್ ಆಫ್ ರೋಡ್ಸ್ ಎಂಬ ಯುವಕರ ತಂಡ ತಾ. 26 ರ ಗಣರಾಜ್ಯೋತ್ಸವ ದಿನದಂದು ದಕ್ಷಿಣ ಕೊಡಗಿನಿಂದ ಉತ್ತರ ಕೊಡಗಿನವರೆಗೆ ದಿ ರಿಪಬ್ಲಿಕ್ ರೈಡ್ ಎಂಬ ಬೈಕ್ ರೈಡ್ ಆಯೋಜಿಸಿದೆ.
ಕಳೆದ ಎಂಟು ತಿಂಗಳ ಹಿಂದೆ ದಕ್ಷಿಣ ಕೊಡಗಿನ ಯುವಕರು ಸೌತ್ ಕೂರ್ಗ್ ಆಫ್ ರೋಡ್ಸ್ ಎಂಬ ತಂಡ ರಚಿಸಿದ್ದಾರೆ. ಈ ಹಿಂದೆ ದಕ್ಷಿಣ ಕೊಡಗಿನಲ್ಲೇ ಎರಡು ಬೈಕ್ ಆಫ್ ರೋಡ್ ರ್ಯಾಲಿಗಳನ್ನು ಆಯೋಸಿದ್ದರು.
ಕಳೆದೆರೆಡು ತಿಂಗಳ ಹಿಂದೆ ಬೆಟ್ಟಗುಡ್ಡ ತೋಡು ತೊರೆಗಳ ನಡುವೆ ಆಯೋಜಿಸಿರುವ ‘ಕುಂದ್ ಮೊಟ್ಟೆ ರೈಡ್’ ಎಂಬ ಬೈಕ್ ಆಫ್ ರೋಡ್ ರ್ಯಾಲಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದವು.
ಅದೇ ರೀತಿ ತಾ. 26 ರಂದು ಗಣರಾಜ್ಯೋತ್ಸವ ದಿನ ಜನರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ ಸೌತ್ ಕೂರ್ಗ್ ಆಫ್ ರೋಡ್ಸ್ ಯುವಕರ ತಂಡ ದಕ್ಷಿಣ ಕೊಡಗಿನಿಂದ ಹಿಡಿದು ಉತ್ತರ ಕೊಡಗಿನವರೆಗೆ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ.
ತಾ. 26 ರಂದು ಬೆಳಿಗ್ಗೆ 7 ಗಂಟೆಗೆ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿ ನಲ್ಲಿರುವ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯ ಸ್ಥಳದಿಂದ ದೇಶದ ತ್ರಿವರ್ಣ ಧ್ವಜದೊಂದಿಗೆ ತಂಡದ 20 ಬೈಕ್ಗಳು ರ್ಯಾಲಿ ಹೊರಡಲಿದೆ. ಈ ಸಂದರ್ಭ ಸೌತ್ ಕೂರ್ಗ್ ಆಫ್ ರೋಡ್ಸ್ ತಂಡದ ನೂತನ ಲಾಂಛನ ಬಿಡುಗಡೆ ಮಾಡಲಾಗುತದೆ.
ಗೋಣಿಕೊಪ್ಪದಿಂದ ಪಿರಿಯಾಪಟ್ಟಣ, ಕುಶಾಲನಗರ, ಸೋಮವಾರಪೇಟೆ, ಮಲ್ಲಳಿ ಜಲಪಾತ ನಂತರ ಮಡಿಕೇರಿ ಕೋಟೆಗೆ ತಲಪಿ ಮರಗೋಡು ಅಮ್ಮತಿ-ಒಂಟಿಯಂಗಡಿ ಮಾರ್ಗವಾಗಿ ಸಂಜೆ ಗೋಣಿ ಕೊಪ್ಪಲುವಿನಲ್ಲಿ ಕೊನೆ ಗೊಳ್ಳಲಿದೆ ಎಂದು ಆಯೋಜಕ ಸಜನ್ ಪೂವಯ್ಯ ಹಾಗೂ ತಂಡದವರು ಮಾಹಿತಿ ನೀಡಿದ್ದಾರೆ.