ಸೋಮವಾರಪೇಟೆ, ಜ. 20: ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಬಿದ್ದು ತನ್ನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಚಿಕಿತ್ಸೆ ಪಡೆಯುತ್ತಿರುವ ಪಟ್ಟಣದ ಜನತಾ ಕಾಲೋನಿ ನಿವಾಸಿ, ಬಿ.ಜೆ. ಶ್ರೀನಿವಾಸ್ ಅವರ ಪತ್ನಿ ರಾಣಿಯವರ ಚಿಕಿತ್ಸೆಗೆ ಸ್ಥಳೀಯ ಕುರುಹಿನ ಶೆಟ್ಟಿ ಸಮಾಜದಿಂದ ಸಹಾಯ ಧನವನ್ನು ವಿತರಿಸಲಾಯಿತು.

ಪಟ್ಟಣದ ಶ್ರೀ ರಾಮ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ರಾಮಶೆಟ್ಟಿ, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ಬಿ.ಎಂ. ಶ್ರೀಧರ್ ಸಮಾಜದ ವತಿಯಿಂದ ನೀಡಲ್ಪಡುವ ರೂ. 5 ಸಾವಿರ ಮೊತ್ತದ ಚೆಕ್ಕನ್ನು ಹಸ್ತಾಂತರಿಸಿದರು.

ಈ ಸಂದರ್ಭ ಸಮಾಜದ ಪ್ರಮುಖರುಗಳಾದ ರೇವಣ್ಣ, ಪ್ರಕಾಶ್, ಸತೀಶ್, ಮಂಜುನಾಥ್ ಅವರುಗಳು ಹಾಜರಿದ್ದರು.