ಮಡಿಕೇರಿ, ಜ. 19: ಮಕ್ಕಳು ಕುಣಿದು ಕುಪ್ಪಳಿಸಿದರು. ನೋವು ಮರೆತು ನಲಿವಿನಲ್ಲ್ಲಿ ಕಳೆದರು. ಜಿಲ್ಲೆಯಲ್ಲಿ ಪ್ರವಾಹದ ಬಳಿಕ ತೊಂದರೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಗಳಲ್ಲಿನ ಮಕ್ಕಳು ಮಂಕು ಕವಿದ ಸ್ಥಿತಿಯಲ್ಲಿದ್ದವರು ಇಂದು ಎಲ್ಲ ಮರೆತು, ತಮ್ಮ ಸಹಪಾಠಿಗಳು ನೆರೆ ಕರೆಯ ವಿದ್ಯಾರ್ಥಿ ಮಿತ್ರರೊಂದಿಗೆ ಬೆರೆತು ಹಸನ್ಮುಖಿಗಳಾಗಿ ನಲಿದರು. ವಿವಿಧ ರೀತಿಯ ಕ್ರೀಡೆಗಳು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡ ನೋಟ ವೀಕ್ಷಕರಿಗೂ ಮುದ ನೀಡಿತು..

“ಅತಿವೃಷ್ಟಿಯ ಕೆಟ್ಟ ಕನಸಿನ ನಂತರ ನಾವೆಲ್ಲರು ಈಗ ಸಂತಸದಿಂದ ಈ ಕ್ರೀಡಾ ಹಾಗೂ ಸಾಂಸ್ಕøತಿಕ ಕೂಟದಲ್ಲಿ ಭಾಗವಹಿಸುತ್ತಿದ್ದೇವೆ. ನಾನು ಕಬಡ್ಡಿಯಲ್ಲಿ ಭಾಗವಹಿಸಲು ಸಿದ್ದಳಾಗಿದ್ದೇನೆ,” ಎಂದು ಮಾದಾಪುರ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಬಿಂದು ತನ್ನ ಸಹಪಾಠಿಯರೊಡನೆ ನಿಂತು ಕುಪ್ಪಳಿಸುತ್ತಾ ಹೇಳುತ್ತಾಳೆ.ತಾ.19 ರಂದು ಮಾದಾಪುರ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಬಡ್ಡಿ, ಥ್ರೋಬಾಲ್, 100/200 ಮೀಟರ್ ಓಟ, ಡಿಸ್ಕ್ ಥ್ರೋ ಮತ್ತು ಇನ್ನಿತರ ಹಲವಾರು ಕ್ರೀಡೆಗಳಲ್ಲಿ ಹುರುಪಿನಿಂದ ಪಾಲ್ಗೊಂಡರಲ್ಲದೆ ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಕೊಡಗಿನಲ್ಲಿ ಸಂತ್ರಸ್ತರಿಗೆ ಸ್ವಯಂಸೇವಾ ಸಂಸ್ಥೆಗಳಿಂದ ದೊರಕುತ್ತಿರುವ ಪ್ರೋತ್ಸಾಹ ಸೇವೆಗÀಳಲ್ಲಿ ಈ ಕ್ರೀಡಾ ಹಾಗೂ ಸಾಂಸ್ಕøತಿಕ ಕೂಟವು ಬೆಂಗಳೂರಿನ ಜಾಗೃತಿ ಟ್ರಸ್ಟ್‍ನಿಂದ ನಿಯೋಜಿಸಿರುವ ಒಂದು ವಿಭಿನ್ನ ಪುನಶ್ಚೇತನ ತುಂಬುವ ಕಾರ್ಯಕ್ರಮವಾಗಿದೆ. “ಕೊಡಗಿನಲ್ಲಿ ಪ್ರಕೃತಿ ವಿಕೋಪದ ನಂತರ ಜಾಗೃತಿ ಟ್ರಸ್ಟ್ ಜಿಲ್ಲೆಗೆ ಆಗಮಿಸಿ ಪರಿಹಾರ ಕೇಂದ್ರಗಳಿಗೆ ತೆರಳಿ ನೊಂದವರಿಗೆ ಅನೇಕ ರೀತಿಯ ಸಹಾಯ ನೀಡಿತ್ತು. ಈ ಪರಿಹಾರ ಕೇಂದ್ರಗಳಲ್ಲಿ ಬಹಳಷ್ಟು ಮಕ್ಕಳಿದ್ದರು. ಇವರಲ್ಲಿ ಅನೇಕರು ಖಿನ್ನತೆಗೊಳಗಾಗಿದ್ದರು. ಇವರಲ್ಲಿ ಮರುಚೇತನ ಮೂಡಿಸಲು ನಮ್ಮ ಟ್ರಸ್ಟ್‍ನ ಸ್ವಯಂಸೇವಕರು ಪ್ರಕೃತಿ ವಿಕೋಪಕ್ಕೊಳಗಾದ ಅನೇಕ ಶಾಲೆಗಳಿಗೆ ತೆರಳಿ ಮಕ್ಕಳಿಗೆ ಅರಿವು ಕಾರ್ಯಕ್ರಮ, ವೃತ್ತಿ ತರಬೇತಿ ಸೇರಿದಂತೆ ವಿವಿಧ ರೀತಿಯ ಸಮಾಲೋಚನಾ ಕಾರ್ಯಕ್ರಮಗಳನ್ನು ಸುಮಾರು 10 ಶಾಲೆಗಳಲ್ಲಿ ಹಮ್ಮಿಕೊಂಡಿತ್ತು. ಇನ್ನು ಮುಂದೆÉ, ಮಕ್ಕಳೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರೀಡಾ ಹಾಗೂ ಸಾಂಸ್ಕøತಿಕ ಕೂಟವನ್ನು ಆಯೋಜಿಸಿದ್ದೇವೆ,” ಎಂದು , ಜಾಗೃತಿ ಟ್ರಸ್ಟ್‍ನ ಆಡಳಿತಾಧಿಕಾರಿ ಕಣ್ಣನ್ ಮಾದಾಪುರ ಶಾಲೆಯಲ್ಲಿ ಕ್ರೀಡಾಕೂಟವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾ ‘ಶಕ್ತಿ’ಗೆ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ದುರ್ಬಲ ಮಕ್ಕಳ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವ ಜಾಗೃತಿ ಟ್ರಸ್ಟ್ ಅನ್ನು 1999 ರಲ್ಲಿ ಕೊಡಗಿನವರೇ ಆದ ರೇಣು ಅಪ್ಪಚ್ಚು ಅವರು ಸ್ಥಾಪಿಸಿದರು; ಈ ನಿಟ್ಟಿನಲ್ಲಿ ಈಗ ಕೊಡಗಿನ ಮಕ್ಕಳಿಗೆ ಸಹಾಯ ಹಸ್ತ ಟ್ರಸ್ಟ್‍ನ ಮೂಲಕ ದೊರೆಯುತ್ತಿದೆ ಎಂದು ಟ್ರಸ್ಟ್‍ನ ಸ್ವಯಂಸೇವಕ ಶರಣು ಅಭಿಪ್ರಾಯಪಟ್ಟರು.

“ನಾವು ಪ್ರಕೃತಿ ವಿಕೋಪಕ್ಕೆ ಒಳಗಾದ ಮಕ್ಕಳನ್ನು ಭೇಟಿಯಾದ ಸಮಯದಲ್ಲಿ ಅವರು ನಮ್ಮೊಡನೆ ಅವರ ನೋವನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದರು. ನಮ್ಮ ಹಾಗೂ ಈ ಮಕ್ಕಳ ಮಧ್ಯವಿರುವ ಅಡ್ಡ ಗೋಡೆಯನ್ನು ಮುರಿಯಲು ನಾವು ಈ ಸ್ಫೂರ್ತಿ ಚೇತನ’ ಕೂಟವನ್ನು ಹಮ್ಮಿಕೊಂಡಿದ್ದೇವೆ. ಈಗÀ ನಾವು ಈ ಮಕ್ಕಳಿಗೆ ಅಪರಿಚಿತರಲ್ಲ,” ಎಂದು ಜಾಗೃತಿ ಟ್ರಸ್ಟ್‍ನ ಹಾಗೂ ಸಿಸ್ಕೊ ಕಂಪನಿಯ ಸಂಪತ್ ತಿಳಿಸಿದರು.