ಸುಂಟಿಕೊಪ್ಪ, ಜ. 19: ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿಯ ಶ್ರೀ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲು ಒಡೆದು ಒಳ ನುಗ್ಗಿ ದೇವರ ಎರಡು ಕಾಣಿಕೆ ಡಬ್ಬದಲ್ಲಿದ್ದ ಸುಮಾರು 25 ಸಾವಿರಕ್ಕೂ ಅಧಿಕ ಹಣವನ್ನು ದೋಚಿರುವ ಬಗ್ಗೆ ವರದಿಯಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಎಂದಿನಂತೆ ಅರ್ಚಕರು ಪೂಜೆಗೆ ತೆರಳಿದ ಸಂದರ್ಭ ದೇವಾಲಯದ ಮುಂಬಾಗಿಲು ತೆರೆದು ಕೊಂಡಿದ್ದು ಗೋಚರಿಸಿದೆ.

ಕೂಡಲೆ ದೇವಾಲಯದ ಆಡಳಿತ ಮಂಡಳಿಗೆ ಘಟನೆÉಯನ್ನು ದೂರವಾಣಿ ಮೂಲಕ ತಿಳಿಸಿದ್ದಾರೆ. ಆಡಳಿತ ಮಂಡಳಿಯವರು ಆಗಮಿಸಿ ಬಂದು ಪರಿಶೀಲಿಸಿದಾಗ ದೇವಾಲ ಯದ ಬಾಗಿಲು ಮುರಿದಿದ್ದು ಕಾಣಿಕೆ ಡಬ್ಬವನ್ನು ಗ್ರಾಮ ಪಂಚಾಯಿತಿ ಆವರಣದಲ್ಲಿ ಎಸೆದಿರುವದು ಗೋಚರಿಸಿದೆ.

ಈ ಕುರಿತು ಆಡಳಿತ ಮಂಡಳಿಯವರು ಪಂಚಾಯಿಯಲ್ಲಿ ಆಳವಡಿದ ಸಿಸಿ ಕ್ಯಾಮೆರವನ್ನು ಪರಿಶೀಲಿಸಿದಾಗ ಶುಕ್ರವಾರ ಮಧ್ಯ ರಾತ್ರಿ 12 ಗಂಟೆ 18 ನಿಮಿಷದಲ್ಲಿ ಜರ್ಕಿನ್ ಧರಿಸಿದ ವ್ಯಕ್ತಿಯೊಬ್ಬ ದೇವಾಲಯದ ಎರಡು ಕಾಣಿಕೆ ಡಬ್ಬವನ್ನು ಒಡೆದು ಪಂಚಾಯಿತಿಯ ಕಟ್ಟೆ ಮೇಲೆ ಇಟ್ಟು ಅದರಲ್ಲಿದ್ದ ಹಣವನ್ನು ಲೆಕ್ಕ ಮಾಡಿ ನಂತರ ಹೊರ ಹೋಗಿರುವದು ದಾಖಲಾ ಗಿದೆ. ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.