ನಾಪೆÇೀಕ್ಲು, ಜ. 19: ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರುಳಿ ಬಳಿ ಕಾವೇರಿ ನದಿಯಲ್ಲಿ ಮರಳು ತೆಗೆಯುವ ಸಂಬಂಧ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದಿರುವ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯ ಕೆ.ಪಿ.ವಿನೋದ್ ಎಂಬವರು ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ತೋಟದ ಸಮೀಪ ಮರಳು ತೆಗೆಯುವದನ್ನು ಪ್ರಶ್ನಿಸಿದ ಹಿನ್ನಲೆಯಲ್ಲಿ ಕಲಿಯಂಡ ರವಿ ಹಾಗೂ ಇತರರು ಅವಾಚ್ಯ ಶಬ್ಧಗಳಿಂದ ನನ್ನನ್ನು ನಿಂದಿಸಿ ಬೆನ್ನಿಗೆ ಗಾಯಗೊಳಿಸಿ ಶರ್ಟು ಹರಿದು ಹಾಕಿ ಕೊಲೆ ಬೆದರಿಕೆ ಹಾಕಿರುವದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸ ಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.