ಮಡಿಕೇರಿ, ಜ. 17: ಕೊಡಗಿನಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ, ಬೆಳವಣಿಗೆಗೆ ಪೂರಕವಾದ ಪ್ರೋತ್ಸಾಹ, ಆರ್ಥಿಕ ನೆರವು ಸರಕಾರದಿಂದ ಕ್ಷೀಣಗೊಳ್ಳುತ್ತಿದೆ. ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ವನ್ನು ನಾಮಕಾವಸ್ಥೆಗೆ ಉಳಿಸಿಕೊಳ್ಳ್ಳಲಾಗಿದೆ. ಖಾದಿ ಮತ್ತು ಗ್ರಾಮ ಕೈಗಾರಿಕಾ (ಕೆವಿಐ) ವಿಭಾಗವು ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸರಕಾರದ ಅಗತ್ಯ ಆರ್ಥಿಕ ಮಂಜೂರಾತಿ ಕೊರತೆ, ಸಿಬ್ಬಂದಿಯ ತೀವ್ರ ಕೊರತೆಯಿಂದ ನಲುಗುತ್ತಿದೆ. ಈ ನಡುವೆ ಕೊಡಗಿನಲ್ಲಿ ಕ್ರಿಯಾಶೀಲವಾಗಿದ್ದ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ (ಕೆಎಸ್ಎಸ್ಐಡಿಸಿ) ಕಚೇರಿಯನ್ನು ಮೈಸೂರಿಗೆ ಸ್ಥಳಾಂತರಗೊಳಿಸಿದ ಬಳಿಕ ನಿಗಮದ ಚಟುವಟಿಕೆ ಸ್ಥಗಿತಗೊಂಡಿದೆ. ಅಲ್ಲದೆ, ಕಳೆÉದ 15 ವರ್ಷಗಳ ಹಿಂದೆ ನಿರ್ಮಾಣ ಪ್ರಗತಿಯಲ್ಲಿದ್ದ ನಿಗಮದ ಮಡಿಕೇರಿಯಲ್ಲಿನ ಬೃಹತ್ ಕಟ್ಟಡ ಪೂರ್ಣಗೊಳ್ಳದೆ ಪಾಳುಬಿದ್ದಿದೆ.ಕೇವಲ ಪ್ಲ್ಲಾಂಟೇಷನ್ ಬೆಳೆಗಳನ್ನು ನಂಬಿ ಹೆಚ್ಚಿನ ಮಂದಿ ಬದುಕು ಸಾಗಿಸುತ್ತಿರುವ ಕೊಡಗಿನಲ್ಲಿ ಈ ಹಿಂದೆ ಸಣ್ಣ ಕೈಗಾರಿಕೆಗಳಿಗೆ ಅಧಿಕ ಪ್ರೋತ್ಸಾಹ ನೀಡಿ ಆರ್ಥಿಕ ನೆರವು ಕಲ್ಪಿಸುವ ಅನೇಕ ಯೋಜನೆಗಳು ಜಾರಿಯಲ್ಲ್ಲಿದ್ದವು. ಏಕೆಂದರೆ, ಕೊಡಗಿನಲ್ಲಿ ಬೃಹತ್ ಕೈಕಾರಿಕೆಗಳ ಸ್ಥಾಪನೆಗೆ ಜಿಲ್ಲೆಯ ಪರಿಸರ, ಹವಾಮಾನ, ಅತೀವ ಮಳೆ ಅವಕಾಶ ಕಲ್ಪಿಸಿಲ್ಲ. ಆದರೆ ಸಣ್ಣ ಕೈಕಾರಿಕೆಗಳ ಚಟುವಟಿಕೆ, ಸ್ಥಾಪನೆಗೆ ವಿಪುಲ ಅವಕಾಶವಿದೆ. ಇದೀಗ ಸರಕಾರ ಹಲವು ವರ್ಷಗಳಿಂದ ಕೈಗಾರಿಕಾ ಬೆಳವಣಿಗೆಯ ಚಟುವಟಿಕೆಗೆ ಅಗತ್ಯವಾಗಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ರೆಕ್ಕೆ-ಪುಕ್ಕ ಕತ್ತರಿಸಿ ನಾಮಕಾವಸ್ಥೆಗೆ ಈ ಕೇಂದ್ರ ನಗರದ ಕೈಗಾರಿಕಾ
(ಮೊದಲ ಪುಟದಿಂದ) ಬಡಾವಣೆಯಲ್ಲಿ ಅಸ್ತ್ತಿತ್ವದಲ್ಲಿದೆ. ಖಾದಿ ಮತ್ತು ಗ್ರಾಮ ಕೈಗಾರಿಕಾ (ಕೆವಿಐ) ವಿಭಾಗವು ಜಿಲ್ಲಾ ಪಂಚಾಯ್ತಿ ಅಧೀನದಲ್ಲಿದ್ದು, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಉತ್ತಮ ಯೋಜನೆಗಳಿದ್ದರೂ ಸರಕಾರದಿಂದ ಜಿ.ಪಂ ಮೂಲಕ ಅಗತ್ಯವಾದ ಆರ್ಥಿಕ ಮಂಜೂರಾತಿಯಿಲ್ಲದೆ, ಸಿಬ್ಬಂದಿಗಳ ವ್ಯವಸ್ಥೆಯೂ ಇಲ್ಲದೆ ಕೊಡಗಿನಲ್ಲಿ ಕೈಗಾರಿಕಾ ಬೆಳವಣಿಗೆ ತೀವ್ರ ಕುಂಠಿತಗೊಳ್ಳುತ್ತಿದೆ.
ಮಡಿಕೇರಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಕಚೇರಿಯಿತ್ತು. ಬಳಿಕ ಇದನ್ನು ಕುಶಾಲನಗರಕ್ಕೆ ವರ್ಗಾಯಿಸಲಾಯಿತು. ಅಲ್ಲಿಂದ ಸದ್ದಿಲ್ಲದೆ ಮೈಸೂರಿಗೆ ವರ್ಗಾಯಿಸಲಾಯಿತು. ಈ ನಡುವೆ ಕಳೆÉದ 15 ವರ್ಷಗಳ ಹಿಂದೆ ಸುಮಾರು ರೂ. 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ತಂತ್ರೋದ್ಯಾನ ಸ್ಥಾಪನೆಯ ಉದ್ದೇಶದ ಬೃಹತ್ ಕಟ್ಟಡದ ಬಹುಪಾಲು ಕೆಲಸ ಮುಗಿದಿದ್ದರೂ ಕೊನೆಯ ಹಂತದ ಕೆಲಸ ಬಾಕಿಯಾಗಿದೆ. ಗುತ್ತಿಗೆÀದಾರ ಮತ್ತು ನಿಗಮದ ನಡುವೆ ಉಂಟಾದ ವಿವಾದ ನ್ಯಾಯಾಯಲದ ಮೆಟ್ಟಿಲೇರಿದ್ದು ಬಳಿಕ ನಿಗಮದ ಪರ ತೀರ್ಪು ಹೊರಬಿದ್ದಿತು . ಆದರೂ ಸಮಸ್ಯೆ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಮರು ಟೆಂಡರ್ ಕರೆಯುವ ಕುರಿತು ಚಿಂತಿಸುತ್ತಿರುವದಾಗಿ ನಿಗಮದ ಮೈಸೂರು ವಿಭಾಗದ ಸಹಾಯಕ ವ್ಯವಸ್ಥಾಪಕ ರಂಗಸ್ವಾಮಿ “ಶಕ್ತಿ” ಗೆ ಖಾತರಿಪಡಿಸಿದ್ದಾರೆ.ಮೂರು ಮಹಡಿಯ ಈ ಬೃಹತ್ ಕಟ್ಟಡದಲ್ಲಿ ದಸರಾ ಕಲಾಕೃತಿಗಳ ಕೆಲವು ವಸ್ತುಗಳು ಕೋಣೆಯೊಂದÀರೊಳಗೆ ಹಾಕಲ್ಪಟ್ಟಿರುವದು ಕಂಡುಬಂದಿದೆ. ಕೆಲವೊಂದು ಸಂದರ್ಭ ಭಿಕ್ಷುಕರು, ಇನ್ಯಾರ್ಯಾರೋ ಈ ಕಟ್ಟಡವನ್ನು ಮಲಗಲು ಆಶ್ರಯ ಪಡೆದಿರುವ ಸನ್ನಿವೇಶವೂ ಕಂಡುಬಂದಿದೆ. ಒಂದೆಡೆ ತಂತ್ರೋದ್ಯಾನ, ಮತ್ತೊಂದೆಡೆ ವಾಣಿಜ್ಯ ಕಟ್ಟಡವಾಗಿ ರೂಪುಗೊಂಡ ಈ ಸಂಕೀರ್ಣವನ್ನು 2 ದಶಕಗಳಾದರೂ ಪೂರ್ಣಗೊಳಿಸಿ ಬಳಸಲ್ಪಡುವಂತೆ ಮಾಡಲು ಕೈಗಾರಿಕಾ ನಿಗಮವು ವಿಫಲಗೊಂಡಿದೆ.. ಈ ಹಿಂದೆ ನಿಗಮದ ಅಧ್ಯಕ್ಷರಾಗಿದ್ದ ಟಿ.ಪಿ ರಮೇಶ್ ಅವರ ಪ್ರಕಾರ ತಾನು ಕಳೆದ 15 ವರ್ಷಗಳ ಹಿಂದೆ ಅಧ್ಯಕ್ಷನಾಗಿದ್ದಾಗಲೇ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದರೂ ಇನ್ನೂ ಪೂರ್ಣಗೊಳ್ಳದೆ ಉಪಯೋಗಕ್ಕೆ ಬಾರದೆ ವ್ಯರ್ಥವಾಗುತ್ತಿದೆÀ. ಈ ಬಗ್ಗೆ ಅವರು “ಶಕ್ತಿ” ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಂಬಂಧಿಸಿದವರು ಶೀಘ್ರ ಗಮನಹರಿಸುವಂತೆ ಕೋರಿದ್ದಾರೆ.
ಕೆವಿಐ ನ ನಿವೃತ್ತ ಉಪ ನಿರ್ದೇಶಕ ಷಬೀರ್ ಪಾಶ ಅವರ ಪ್ರಕಾರ ಈ ಕಟ್ಟಡವನ್ನು ಮಾರಾಟಗೊಳಿಸುವ ಪ್ರಯತ್ನ ನಡೆದಿದೆ. ನಿಗಮದ ಮಾರಾಟ ದರ ಒಪ್ಪಿಗೆಯಾಗದ ಹಿನ್ನೆಲೆಯಲ್ಲಿ ಬಿಡ್ಡರ್ಸ್ಗಳು ಬರಲಿಲ್ಲ. ಅಲ್ಲದೆ, ಬಾಡಿಗೆಗೆ ನೀಡುವ ಪ್ರಯತ್ನವೂ ಕಟ್ಟಡ ಕೆಲಸ ಪೂರ್ಣಗೊಳ್ಳದುದರಿಂದ ವಿಫಲವಾಯಿತು.
ಸಿಬ್ಬಂದಿ ಕೊರತೆ : ಈ ನಡುವೆ ಡಿಐಸಿ ಮತ್ತು ಕೆವಿಐ ಕೇಂದ್ರಗಳಲ್ಲಿ ಒಟ್ಟು 17 ಸಿಬ್ಬಂದಿಗಳ ಕೊರತೆಯಿದೆ. ಪ್ರಸಕ್ತ ಸಾಲಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ನೆರವು ಕಲ್ಪಿಸಲು ಜಿಲ್ಲೆಯಿಂದ ರೂ. 21 ಲಕ್ಷದ ಬೇಡಿಕೆ ಮುಂದಿಡಲಾಗಿತ್ತು. ಈ ಪೈಕಿ ರೂ. 7 ಲಕ್ಷ ಮಾತ್ರ ಸರಕಾರದಿಂದ ಹಣ ಬಿಡುಗಡೆಯಾಗಿದ್ದು ಅರ್ಹ ಫಲಾನುಭವಿಗಳಿಗೆ ವಿತರಿಸÀಲಾಗಿದೆ; ಆದರೆ ಇನ್ನೂ ಅನೇಕರಿಗೆ ಒದಗಿಸಬೇಕಾಗಿದೆ ಎಂದು ಕೆವಿಐನ ಉಪ ನಿರ್ದೇಶಕ ರಘು “ಶಕ್ತಿ”ಗೆ ಮಾಹಿತಿಯಿತ್ತರು. ಪ್ರಸಕ್ತ ಗಾರೆ ಕೆಲಸ ಮಾಡುವವರಿಗೂ ಕೂಡ ಉಪಕರಣಗಳನ್ನು ಖರೀದಿಸಲು ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲು ಯೋಜನೆಗಳಿವೆ ಎಂದು ಅವರು ತಿಳಿಸಿದರು. ಆದರೆ, ಅಗತ್ಯ ಹಣ ಬಿಡುಗಡೆಯಾಗದೆ ಉತ್ತಮ ಯೋಜನೆಗಳು ಪೂರ್ಣ ಸಫಲವಾಗದಿರುವದು ‘ಶಕ್ತಿ’ಯ ಗಮನಕ್ಕೆ ಬಂದಿದೆ.
ಮೈಸೂರು ವಿಭಾಗದ ಕೈಗಾರಿಕಾ ಜಂಟಿ ನಿರ್ದೇಶಕ ಲಿಂಗರಾಜು ಅವರನ್ನು ದೂರವಾಣಿ ಮೂಲಕ ಶಕ್ತಿ’ ಸಂಪರ್ಕಿಸಿದಾಗ ತಾನು ಕೊಡಗಿನ ಉಸ್ತುವಾರಿಯ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಿರುವದಾಗಿ ಅವರು ತಿಳಿಸಿದರು. ಅವರ ಪ್ರಕಾರ ಕೊಡಗಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹಕ್ಕೆ ಯಾವದೇ ಧಕ್ಕೆಯಾಗಿಲ್ಲ. ಕೈಗಾರಿಕೋದ್ಯಮಿಗಳಿಗೆ ಅಗತ್ಯವಾದ ಸಾಲ ಸೌಲಭ್ಯ ಹಗೂ ಸಹಾಯಧನ ನೀಡಲಾಗುತ್ತಿದೆ. ವೀರಾಜಪೇಟೆಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹಾಗೂ ಜಿಲ್ಲೆÉಯ ಇನ್ನಿತರ ಕೆಲವು ಭಾಗಗಳಲ್ಲಿ ನಿವೇಶÀನಗಳನ್ನು ಗುರುತಿಸಿದ್ದು ಕೈಗಾರಿಕಾ ಪ್ರದೇಶವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.