ರಾಮ್ ರಹೀಮ್ ಸಿಂಗ್‍ಗೆ ಜೀವಾವಧಿ ಶಿಕ್ಷೆ

ನವದೆಹಲಿ, ಜ. 17: ಪತ್ರಕರ್ತ ರಾಮ್ ಚಂದರ್ ಛತ್ರಪತಿ ಕೊಲೆ ಪ್ರಕರಣದಲ್ಲಿ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವÀರಿಗೆ ಜೀವಾವಧಿ ಶಿಕ್ಷೆಯಾಗಿದೆ. ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ರಾಮ್ ರಹೀಮ್ ಸಿಂಗ್ ಹಾಗೂ ಇತರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯ ರೂ. 50,000 ದಂಡವನ್ನು ವಿಧಿಸಿದೆ. ಇದಕ್ಕೆ ಮುನ್ನ ಜನವರಿ 11 ರಂದು ನ್ಯಾಯಾಲಯವು ಕೊಲೆ ಮತ್ತು ಪಿತೂರಿಗಳಿಗೆ ಸಂಬಂಧಿಸಿದಂತೆ ಗುರ್ಮೆತ್ ರಾಮ್ ರಹೀಮ್ ಸಿಂಗ್ ಹಾಗೂ ಮೂವರು ಆರೋಪಿಗಳೆಂದು ಘೋಷಿಸಿತ್ತು. 2002ರಲ್ಲಿ ಹರಿಯಾಣದ ಸಿರ್ಸಾ ನಗರದಲ್ಲಿ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆನಡೆದಿತ್ತು. ಛತ್ರಪತಿ ತಮ್ಮ ಪತ್ರಿಕೆ ಪೂರಾಸಚ್‍ನಲ್ಲಿ ರಾಮ್ ರಹೀಮ್ ಸಿಂಗ್ ಲೈಂಗಿಕ ಕಿರುಕುಳ ಪ್ರಕರಣಗಳ ಕುರಿತು ವರದಿ ಪ್ರಕಟಿಸಿದ ಬೆನ್ನಲ್ಲಿಯೇ ಈ ಕೊಲೆಯಾಗಿತ್ತು. ಇದಾಗಲೇ ಇನ್ನೊಂದು ಪ್ರಕರಣದಲ್ಲಿ 20 ವರ್ಷಗಳ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಮ್ ರಹೀಮ್ ಸಿಂಗ್ ಅವರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಲು ಸಿಬಿಐ ಅನುಮತಿಸಿತ್ತು. 2017ರಲ್ಲಿ ಅವರ ಬಂಧನವಾಗಿದ್ದಾಗ ಪಂಚಕುಲ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಸಂಭವಿಸಿದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಒಪ್ಪಿಕೊಳ್ಳಲಾಗಿದೆ.

ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು, ಜ. 17: ಕಾಂಗ್ರೆಸ್ ನಾಯಕರು ಆಪರೇಷನ್ ಕಮಲ ವಿಫಲವಾಗಿದೆ ಎಂದು ಹೇಳುತ್ತಿದ್ದರೂ ದೋಸ್ತಿ ಸರ್ಕಾರ ಉರುಳಿಸುವ ಬಿಜೆಪಿ ಯತ್ನ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೂ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಸನ್ನಿವೇಶಗಳ ಹಿನ್ನೆಲೆ ನಾಳೆ ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಿಶೇಷ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದಾರೆ. ಅಲ್ಲದೆ ಶಾಸಕರ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನುಚ್ಛೇದ 10ರ ಪ್ರಕಾರ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದ್ದಾರೆ.

ಡ್ಯಾನ್ಸ್ ಬಾರ್‍ಗಳಿಗೆ ಕೋರ್ಟ್ ಅನುಮತಿ

ನವದೆಹಲಿ, ಜ. 17: ಮಹಾರಾಷ್ಟ್ರ ರಾಜ್ಯದಲ್ಲಿ ಡ್ಯಾನ್ಸ್ ಬಾರ್‍ಗಳ ಕಾರ್ಯನಿರ್ವಹಣೆಗೆ ಅನುಮತಿ ನೀಡುವದಕ್ಕೆ ನಿರ್ಬಂಧ ಹೇರಿ 2016ರಲ್ಲಿ ತಂದಿದ್ದ ನಿಯಮಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಕೆಲವೊಂದು ಬದಲಾವಣೆಗಳನ್ನು ಮಾಡಿ ಆದೇಶ ಹೊರಡಿಸಿದೆ. ರಾಜ್ಯದ ಡ್ಯಾನ್ಸ್ ಬಾರ್‍ಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ನಿಯೋಜಿಸಬೇಕೆಂದು ತಂದಿದ್ದ ಕಾನೂನಿಗೆ ವಿನಾಯಿತಿ ನೀಡಿದ ನ್ಯಾಯಾಲಯ, ಸಿಸಿಟಿವಿ ಅಳವಡಿಸುವದರಿಂದ ಗ್ರಾಹಕರ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಹೇಳಿದೆ. ಡ್ಯಾನ್ಸ್ ಬಾರ್‍ಗಳಲ್ಲಿ ನೃತ್ಯ ಮಾಡುವವರಿಗೆ ಗ್ರಾಹಕರು ಟಿಪ್ಸ್ ರೂಪದಲ್ಲಿ ಹಣ ನೀಡುವದಕ್ಕೆ ಅವಕಾಶ ನೀಡಿದೆ. ಆದರೆ ನೃತ್ಯ ಮಾಡುತ್ತಿ ರುವಾಗ ಡ್ಯಾನ್ಸರ್ಸ್ ಮೇಲೆ ನೋಟುಗಳನ್ನು ಗ್ರಾಹಕರು ಎಸೆಯುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಧಾರ್ಮಿಕ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ 1 ಕಿಲೋ ಮೀಟರ್ ಒಳಗೆ ಬಾರ್‍ಗಳನ್ನು ತೆರೆಯುವಂತಿಲ್ಲ ಎಂಬ ನಿಯಮ ಕಡ್ಡಾಯವನ್ನು ಕೂಡ ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ಡ್ಯಾನ್ಸ್ ಬಾರ್‍ಗಳು ಸಾಯಂಕಾಲ 6 ಗಂಟೆಯಿಂದ ರಾತ್ರಿ 11.30 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ಸರ್ಕಾರದ ನಿಯಮವನ್ನು ಎತ್ತಿಹಿಡಿದಿದೆ.

ಗೌರಿ ಹತ್ಯೆ ತನಿಖೆ : ಕೋರ್ಟ್ ಚಾಟಿ

ಮುಂಬೈ, ಜ. 17: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹಾಗೂ ಎಡ ಪಂಥೀಯ ನಾಯಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ಅಂಶಗಳನ್ನು ನೆಚ್ಚಿ ಕೊಳ್ಳದೆ ಸ್ವತಂತ್ರವಾಗಿ ತನಿಖೆ ನಡೆಸುವಂತೆ ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿಗೆ ಬಾಂಬೆ ಹೈಕೋರ್ಟ್ ಗುರುವಾರ ಆದೇಶಿಸಿದೆ. ದಾಭೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ನ್ಯಾಯಮೂರ್ತಿಗಳಾದ ಎಸ್.ಸಿ. ಧರ್ಮಾಧಿಕಾರಿ ಹಾಗೂ ಎಂ.ಎಸ್. ಕಾರ್ಣಿಕ್ ಅವರನ್ನು ಒಳಗೊಂಡ ಹೈಕೋರ್ಟ್ ಪೀಠ, ಸಿಬಿಐ ಮತ್ತು ಸಿಐಡಿಗೆ ಚಾಟಿ ಬೀಸಿದೆ. ಮಹಾರಾಷ್ಟ್ರ ಸಿಐಡಿ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‍ಐಟಿ) ಇಂದು ದಾಭೋಲ್ಕರ್ ಮತ್ತು ಪನ್ಸಾರೆ ಕೊಲೆ ಪ್ರಕರಣದ ತನಿಖೆಯಲ್ಲಿ ಆಗಿರುವ ಪ್ರಗತಿಯ ವರದಿಯನ್ನು ಕೋರ್ಟಿಗೆ ಸಲ್ಲಿಸಿದೆ. ಈ ವೇಳೆ ಕೋರ್ಟ್ ತನಿಖಾ ಸಂಸ್ಥೆ ಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಕರ್ನಾಟಕದ ತನಿಖಾಧಿಕಾರಿಗಳು ಬಂಧಿಸಿರುವವರನ್ನು ತಾವು ದಾಭೋಲ್ಕರ್‍ಮತ್ತು ಪನ್ಸಾರೆ ಕೊಲೆ ಕೇಸಿಗೆ ಸಂಬಂಧಪಟ್ಟಂತೆ ಪ್ರಶ್ನಿಸುತ್ತಿದ್ದೇವೆ ಎಂದು ಎಸ್‍ಐಟಿ ಕೋರ್ಟಿಗೆ ತಿಳಿಸಿದಾಗ, ನಿಮ್ಮ ತನಿಖೆಯನ್ನು ನೀವು ಸ್ವತಂತ್ರವಾಗಿ ಮಾಡಿ ಅನ್ಯರನ್ನು ನೆಚ್ಚಿಕೊಳ್ಳಬೇಡಿ ಎಂದು ಕೋರ್ಟ್ ಹೇಳಿದೆ.

ಭದ್ರತಾ ಪಡೆಗಳ ಮೇಲೆ ಗ್ರೆನೇಡ್ ಧಾಳಿ

ಶ್ರೀನಗರ, ಜ. 17: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಗುರುವಾರ ಭದ್ರತಾ ಪಡೆಗಳ ಮೇಲೆ ಉಗ್ರರು ಗ್ರೆನೇಡ್ ಧಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಝಿರೋ ಬ್ರಿಡ್ಜ್ ಬಳಿ ಉಗ್ರರು ಗ್ರೆನೇಡ್ ಎಸೆದಿದ್ದು, ಧಾಳಿಯಲ್ಲಿ ಸಂಚಾರಿ ಪೆÇಲೀಸ್ ಪೇದೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯ ಕಚೇರಿ ಹಾಗೂ ಆಲ್ ಇಂಡಿಯಾ ರೇಡಿಯೋ ಕಚೇರಿಯಿಂದ ಕೇವಲ 100 ಮೀಟರ್ ದೂರದಲ್ಲಿ ಈ ಧಾಳಿ ನಡೆದಿದೆ. ಭದ್ರತಾ ಸಿಬ್ಬಂದಿ ಉಗ್ರರಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಲಘು ಯುದ್ಧ ಹೆಲಿಕಾಪ್ಟರ್ ಸಿದ್ಧ

ಬೆಂಗಳೂರು, ಜ. 17: ಹೆಚ್‍ಎಎಲ್ ನಿರ್ಮಿತ ಅಭಿವೃದ್ಧಿ ಹೊಂದಿದ ಲಘು ಯುದ್ಧ ಹೆಲಿಕಾಪ್ಟರ್ ಈಗ ಸೇನಾ ಬತ್ತಳಿಕೆ ಸೇರಲು ಸಿದ್ದವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ವಿನ್ಯಾಸಗೊಳಿಸಿರುವ ದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (ಎಲ್ಸಿಹೆಚ್) ಏರ್-ಟು-ಏರ್ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದು ಸೇನೆಗೆ ಸೇರ್ಪಡೆಗೊಳ್ಳಲು ಸನ್ನದ್ಧವಾಗಿದೆ. ವಿಶೇಷವೆಂದರೆ ದೇಶದಲ್ಲೇ ಇಂತಹಾ ವಿಮಾನ ತಯಾರಾಗುತ್ತಿರುವದು ಇದೇ ಮೊದಲನೆಯದಾಗಿದೆ. ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯಗಳಿಗೆ ತಕ್ಕಂತೆ ಸಾರ್ವಜನಿಕ ವಲಯ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‍ಎಎಲ್) ವಿನ್ಯಾಸ ಮತ್ತು ಅಭಿವೃದ್ಧಿಪಡಿಸಿದ ಎಲ್ಸಿಹೆಚ್ ಇದೇ ವರ್ಗಕ್ಕೆ ಸೇರಿದ ಇತರ ಹೆಲಿಕಾಪ್ಟರ್‍ಗಳ ಸಾಮಥ್ರ್ಯಕ್ಕಿಂತ ಹೆಚ್ಚಾಗಿದೆ. ಇತ್ತೀಚೆಗೆ ಒಡಿಶಾದ ಚಂಡಿಪುರದಲ್ಲಿ ನಡೆಸಿದ ಪರೀಕ್ಷೆ ವೇಳೆ ವೈಮಾನಿಕ ಗುರಿಯ ಮೇಲೆ ನೇರವಾದ ಧಾಳಿ ಮಾಡುವಲ್ಲಿ ಹಾಗೂ ಎದುರಾಳಿಯನ್ನು ಸಂಪೂರ್ಣವಾಗಿ ನಾಶಪಡಿಸುವಲ್ಲಿ ಕಾಪ್ಟರ್ ಯಶಸ್ವಿಯಾಗಿದೆ ಎಂದು ಹೆಚ್‍ಎಎಲ್ ವಕ್ತಾರ ಗೋಪಾಲ್ ಸುತಾರ್ ತಿಳಿಸಿದ್ದಾರೆ.

ಚಂದಮಾಮ ಮಾರಾಟಕ್ಕೆ ಕೋರ್ಟ್ ಆದೇಶ

ಮುಂಬೈ, ಜ. 17: ಮಕ್ಕಳ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಹಲವಾರು ವರ್ಷಗಳ ಕಾಲ ಏಕಸ್ವಾಮ್ಯ ಮೆರೆದಿದ್ದ “ಚಂದಮಾಮ”ಗೆ ಈಗ ಸಂಕಷ್ಟ ಎದುರಾಗಿದೆ. ಮಕ್ಕಳ ಪತ್ರಿಕೆ “ಚಂದಮಾಮ” ಬೌದ್ದಿಕ ಹಕ್ಕುಗಳನ್ನು ಮಾರಾಟ ಮಾಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ. “ಚಂದಮಾಮ” ಪತ್ರಿಕೆ ನಡೆಸುತ್ತಿದ್ದ ಜಿಯೋಡೆಸಿಕ್ ಲಿ. ಸಂಸ್ಥೆಯ ಮಾಲೀಕರು ಈಗ ಆರ್ಥಿಕ ಅಪರಾಧ ಪ್ರಕರಣದಲ್ಲಿ ಸಿಕ್ಕು ಜೈಲು ಪಾಲಾಗಿದ್ದಾರೆ. ಹೀಗಾಗಿ ಸಂಸ್ಥೆ “ಚಂದಮಾಮ” ಪತ್ರಿಕೆ ಮಾಡಲು ಯಾವದೇ ಅಡ್ಡಿ ಇಲ್ಲ. ಈ ಕಾರಣದಿಂದ ಸಂಸ್ಥೆಯ ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ಸಂಸ್ಥೆಯ ಸ್ವತ್ತುಗಳನ್ನು ಮಾರಾಟ ಮಾಡಲು ಯಾವದೇ ಷರತ್ತಿಲ್ಲದೆ ಸಮ್ಮತಿ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.