ಮಡಿಕೇರಿ, ಜ. 14: ಅನಿವಾಸಿ ಭಾರತೀಯ ಜಗದೀಶ್ ಐಮಂಡ ವಿರಚಿತ ಕನ್ನಡ ಕಾದಂಬರಿ ಕತ್ತಲೆಯ ಕಿರಣ ಲೋಕಾರ್ಪಣೆಗೊಂಡಿತು. ಮಡಿಕೇರಿಯ ಬಾಲಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ಮತ್ತು ಶಗ ನಯನತಾರಾ ಕೃತಿಯನ್ನು ಅನಾವರಣಗೊಳಿಸಿದರು. ಇದು ಜಗದೀಶ್ ಐಮಂಡ ಅವರ ಚೊಚ್ಚಲ ಕಾದಂಬರಿಯಾಗಿದ್ದು ಸಮಾಜ ಸುಧಾರಣೆ, ಮಧ್ಯಪಾನದ ದುಷ್ಪರಿಣಾಮಗಳು, ಕೊಡಗಿನ ಪರಿಸರದಲ್ಲಿ ನಡೆಯುವ ವಂಚನೆ, ಮೋಸಗಳು ಪೋಷಕರ ಎಡವಟ್ಟುಗಳು ಮತ್ತು ಇದರಿಂದಾಗಿ ಮಕ್ಕಳು ಪಡುವ ಕಷ್ಟಕೋಟಲೆಗಳನ್ನು ಆಧಾರವಾಗಿಟ್ಟು ಕೊಂಡು ಕಾದಂಬರ ಕಥಾಹಂದರ ಹೆಣೆಯಲಾಗಿದೆ. ಸಮಾರಂಭದಲ್ಲಿ ನಿವೃತ ಶಿಕ್ಷಕರಾದ ಯಲದಾಳು ಮಾದಪ್ಪ, ದೇವಜನ ನಾಣಯ್ಯ ಮತ್ತು ಕಾದಂಬರಿಕಾರ ಜಗದೀಶ್ ಐಮಂಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತರಾದ ಆರು ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು. ಐಮಂಡ ಗೋಪಾಲ್ ಸೋಮಯ್ಯ ಕಾರ್ಯಕ್ರಮ ನಿರೂಪಿಸಿದರೆ, ಬಬ್ಬೀರ ಸ್ವರೂಪ್ ಪಳಂಗಪ್ಪ ಪ್ರಾರ್ಥಿಸಿ, ಸ್ವಾಗತಿಸಿದರು.