ಭಾಗಮಂಡಲ, ಜ. 16: ಸಮೀಪದ ಕುಂದಚೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ. ಈ ಭಾಗದ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಸಹಕಾರ ಸಂಘವು ಭಾಗಮಂಡಲ ಕೃಷಿಪತ್ತಿನ ಸಹಕಾರದಿಂದ ವಿಭಜಿಸಲ್ಪಟ್ಟು ನೂತನವಾಗಿ ಕಾರ್ಯಾರಂಭ ಮಾಡಿದೆ.
ಇದರ ನೂತನ ಅಧ್ಯಕ್ಷರಾಗಿ ಕೆದಂಬಾಡಿ ಎಸ್.ಕೀರ್ತಿಕುಮಾರ್ ಉಪಾಧ್ಯಕ್ಷರಾಗಿ ಡಿ.ಇ.ಶ್ರೀಧರ್, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಟಿ.ರಮೇಶ್, ಕೆ.ಎಸ್.ಜಯಪ್ರಕಾಶ್, ವಿ.ಹೆಚ್,ಧನಂಜಯ, ಪಿ.ಜಿ. ಪ್ರಸನ್ನ, ವಿ.ಎಸ್.ವೇಣುಕುಮಾರ್, ಅಂಜಪರವಂಡ ಪ್ರೇಮಲಕ್ಷ್ಮಣ, ಎ.ಎಸ್.ರವಿಕುಮಾರ್, ಕೆ.ಎಸ್.ಇಂದುಮತಿ, ಕೆ.ಎಸ್.ರೂಪಾವತಿ, ಕುಡಿಯರ ಅಪ್ಪಣ್ಣ ಕಾವೇರಮ್ಮ ಹಾಗೂ ಶೇಷು ಮಂಜುಳ ಆಯ್ಕೆಯಾಗಿದ್ದಾರೆ.