ಮಡಿಕೇರಿ, ಜ.16 :ಹಾಕತ್ತೂರು ಗ್ರಾ.ಪಂ ಸದಸ್ಯ ಪಿಯೂಷ್ ಪೆರೇರಾ ಈಗ ಸ್ನೇಕ್ ಪೆರೇರಾ ಆಗಿದ್ದಾರೆ. ಇಲ್ಲಿಯವರೆಗೆ ವಿವಿಧ ಜಾತಿಯ ಸುಮಾರು 50 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಇವುಗಳಲ್ಲಿ ನಾಗರಹಾವುಗಳ ಸಂಖ್ಯೆಯೇ ಹೆಚ್ಚು ಎಂದು ಪೆರೇರಾ ಹೇಳುತ್ತಾರೆ.
ಕಗ್ಗೋಡ್ಲುವಿನ ತುಂತಜೆ ದಯಾನಂದ ಎಂಬವರ ಮನೆಯಲ್ಲಿ ಮಂಗಳವಾರ ಮತ್ತು ಬುಧವಾರ ಸುಮಾರು ಎಂಟು ಅಡಿ ಉದ್ದದ ಎರಡು ನಾಗರಹಾವುಗಳನ್ನು ಸೆರೆ ಹಿಡಿದಿರುವ ಪೆರೇರಾ ಸಂಪಾಜೆ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಹಾವುಗಳು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲದೆ ತಮಗೆ ಮೊಬೈಲ್ ಕರೆ ಮಾಡುವಂತೆ ತಿಳಿಸಿದ್ದಾರೆ. ಮೊ.ಸಂ : 94819 52253