ಮಡಿಕೇರಿ, ಜ. 14: ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷರು ಪಟ್ಟಣದ ಕಸ ವಿಲೇವಾರಿ ಹಾಗೂ ಇತರ ಕಾಮಗಾರಿಯಲ್ಲಿ ಸ್ವಜನ ಪಕ್ಷಪಾತದೊಂದಿಗೆ ದುರುಪಯೋಗ ನಡೆಸಿರುವದಾಗಿ ಅಲ್ಲಿನ ಅಂಬೇಡ್ಕರ್ ದಲಿತ ಸಂಘ ಆರೋಪಿಸಿದೆ. ಈ ಸಂಬಂಧ ಗ್ರಾ.ಪಂ. ಅಧ್ಯಕ್ಷೆ ತನ್ನ ಪತಿ ಹೆಸರಿನಲ್ಲಿ ಕಸ ವಿಲೇವಾರಿ ಸಂಬಂಧ ಟ್ರ್ಯಾಕ್ಟರ್ ಬಾಡಿಗೆಗೆ ಪಡೆದಿರುವದಾಗಿ ಸುಳ್ಳು ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮಾಡಿರುವದಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಹ ಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಅಲ್ಲದೆ ಗ್ರಾ.ಪಂ. ಅಧ್ಯಕ್ಷರ ವಿರುದ್ಧ ತನಿಖೆ ನಡೆಸಿ ಕ್ರಮ ಜರುಗಿಸಲು ಒತ್ತಾಯಿಸಲಾಗಿದೆ.