ಸೋಮವಾರಪೇಟೆ, ಜ. 14: ಸಂಘ-ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿದರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಠಾಣಾಧಿಕಾರಿ ಶಿವಶಂಕರ್ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ಎಸ್.ಸಿ., ಎಸ್.ಟಿ. ಹಿತರಕ್ಷಣಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳ ಕೆಲ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಆಗ್ರಹಿಸಿದರು.
ಈಗಾಗಲೇ ಹಲವು ಕಡೆ ಜೂಜುಕೋರರ ಅಡ್ಡೆಗಳ ಮೇಲೆ ಧಾಳಿ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದು ಠಾಣಾಧಿಕಾರಿ ಹೇಳಿದರು.
ಸಭೆಯಲ್ಲಿ ಪ್ರಮುಖರಾದ ಹೆಚ್.ಬಿ. ಜಯಮ್ಮ, ಜಯಪ್ಪ ಹಾನಗಲ್, ಡಿ.ಎಸ್. ನಿರ್ವಾಣಪ್ಪ, ಬಿ.ಈ. ಜಯೇಂದ್ರ, ಹೆಚ್.ಎ. ನಾಗರಾಜು, ನಳಿನಿ ಗಣೇಶ್, ಟಿ.ಈ. ಸುರೇಶ್, ಎಸ್.ಎ. ಪ್ರತಾಪ್, ಎಂ.ಪಿ. ಹೊನ್ನಪ್ಪ, ಹೆಚ್.ಬಿ. ರಾಜಪ್ಪ, ಬಿ.ಎಂ. ದಾಮೋಧರ್, ಚಿಕ್ಕಣ್ಣ, ಶಂಕರ್ ಉಪಸ್ಥಿತರಿದ್ದರು.