ಮಡಿಕೇರಿ, ಜ. 14: ನಗರದ ಕೊಹಿನೂರು ರಸ್ತೆಯಲ್ಲಿ ನಿತ್ಯ ಶಾಲಾ - ಕಾಲೇಜು ವಿದ್ಯಾರ್ಥಿಗಳ ಸಹಿತ; ಸಾರ್ವಜನಿಕ ಸಂಚಾರದೊಂದಿಗೆ ಜನದಟ್ಟಣೆ ಹಾಗೂ ವಾಹನಗಳ ಓಡಾಟ ತೀವ್ರವಿರುವ ಹಿನ್ನೆಲೆ, ಈ ರಸ್ತೆ ಬದಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲಾಗುವದು ಎಂದು ನಗರಸಭೆಯ ವಾರ್ಡ್ ಸದಸ್ಯ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ. ನಿತ್ಯ ಶಾಲಾ - ಕಾಲೇಜು ವಿದ್ಯಾರ್ಥಿಗಳ ಸಹಿತ ದಾರಿಹೋಕರು ಅಪಾಯದ ನಡುವೆ ಸಂಚರಿಸುತ್ತಿರುವ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಹದೇವಪೇಟೆ ರಸ್ತೆಯ ಇಕ್ಕಡೆಗಳಲ್ಲಿ ಇಂಟರ್‍ಲಾಕ್ ಅಳವಡಿಸುವದರೊಂದಿಗೆ, ಮುಂದುವರಿದ ಕಾಮಗಾರಿಯನ್ನು ಕೊಹಿನೂರು ರಸ್ತೆಯ ಫುಟ್‍ಪಾತ್‍ಗೆ ಅಳವಡಿಸಲಾಗುವದು ಎಂದು ಸ್ಪಷ್ಟಪಡಿಸಿದ್ದಾರೆ.