ಸೋಮವಾರಪೇಟೆ, ಜ. 14: ಪಟ್ಟಣದ ಎಂ.ಡಿ. ಬ್ಲಾಕ್ ನಿವಾಸಿ ಮಾರ್ಷಲ್ ಡಿಸೋಜ (44) ಕಳೆದ 15 ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಕುಮುದ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ ಆಟೋ ಓಡಿಸಿಕೊಂಡಿದ್ದ ಮಾರ್ಷಲ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಪತ್ನಿ ಮೈಸೂರಿನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು, ಮೊನ್ನೆ ಆಗಮಿಸಿದ ಸಂದರ್ಭ ಪತಿ ನಾಪತ್ತೆಯಾಗಿರುವದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ಇದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ, ದೂ. 08276-282040 ಗೆ ಸಂಪರ್ಕಿಸುವಂತೆ ಠಾಣಾಧಿಕಾರಿ ಶಿವಶಂಕರ್ ಸಲಹೆ ಮಾಡಿದ್ದಾರೆ.