ಮಡಿಕೇರಿ, ಜ. 11: ಬ್ಲೂ ಏರ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಂಪೆನಿ ಮಕ್ಕಳಲ್ಲಿ ‘ಕ್ಲೀನ್ ಏರ್’ ಬಗ್ಗೆ ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಮಡಿಕೇರಿ ಮೂಲದ ಬಿಪಿನ್ ಬೇಕಲ್ ಮತ್ತು ಸೌಮ್ಯ ದಂಪತಿ ಮಗ ಆಕರ್ಷ್ ಬೇಕಲ್ ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ್ದಾನೆ.
‘ಬ್ಲೂ ಏರ್ ಚಾಂಪಿಯನ್’ ಎಂದು ಬ್ಲೂ ಏರ್ ಕಂಪೆನಿ ಫೋಷಿಸಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆಕರ್ಷ್ ಬೇಕಲ್ ಟ್ರೋಫಿ, ನಗದು ರೂ. 25 ಸಾವಿರ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದ್ದಾನೆ. ಈತ ಬೆಂಗಳೂರಿನ ಸಿದ್ದಗಂಗಾ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ.