ಮಡಿಕೇರಿ, ಜ. 11: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕೇಲೊ ಇಂಡಿಯಾ ಯೂತ್ ಗೇಮ್ಸ್ 100 ಮೀ.ಓಟದಲ್ಲಿ ಕಾಕೇರ ಪ್ರಜ್ವಲ್ ಮಂದಣ್ಣ 10.86 ಸೆಕೆಂಡ್‍ಗಳಲ್ಲಿ ಕ್ರಮಿಸಿ ದ್ವಿತೀಯ ಸ್ಥಾನ ಪಡೆದು ಕರ್ನಾಟಕಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಕೇವಲ 10 ಸೆಕೆಂಡ್ ಅಂತರದಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾಗಿದ್ದಾರೆ. ಇವರು ಮತ್ತೂರು ಗ್ರಾಮದ ಕಾಕೇರ ರವಿ, ತಾರ ದಂಪತಿಗಳ ಪುತ್ರ.