ಮಡಿಕೇರಿ, ಜ. 11: ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಗರದ ರಾಜಾಸೀಟ್‍ನಲ್ಲಿ ತಾ. 11 ರಿಂದ ತಾ. 13 ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ತಾ. 13 ರಂದು ಓಪನ್ ಸ್ಟ್ರೀಟ್ ಫೆಸ್ಟಿವಲ್ ಅನ್ನು ಏರ್ಪಡಿಸಲಾಗಿರುತ್ತದೆ. ಈ ದಿನದಂದು ನಗರದ ಎಂ.ಎಂ. ವೃತ್ತದಿಂದ ರಾಜಾಸೀಟ್‍ವರೆಗಿನ ರಸ್ತೆ ಬದಿಯಲ್ಲಿ ವಿವಿಧ ಬಗೆಯ ಅಂಗಡಿ ಮಳಿಗೆಗಳನ್ನು ತೆರೆದು ವ್ಯಾಪಾರ ಮಾಡಲಿದ್ದು ಹಾಗೂ ವಿವಿಧ ಕಲಾ ತಂಡಗಳು ರಸ್ತೆಯಲ್ಲಿ ಡೊಳ್ಳು ಕುಣಿತ ಮತ್ತು ಕೀಲು ಕುದುರೆ ಪ್ರದರ್ಶನ ಮಾಡಲಿರುವರು. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಅಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಎಂ.ಎಂ. ವೃತ್ತದಿಂದ ರಾಜಾಸೀಟ್ ಬಳಿ ಇರುವ ಕುಂದುರುಮೊಟ್ಟೆ ದೇವಸ್ಥಾನ ಜಂಕ್ಷನ್‍ವರೆಗಿನ ಮುಖ್ಯ ರಸ್ತೆಯಲ್ಲಿ ಯಾವದೇ ರೀತಿಯ ವಾಹನ ಓಡಾಡದಂತೆ/ ನಿಲುಗಡೆಗೊಳಿಸದಂತೆ ನಿರ್ಬಂಧಿಸಿ ವಾಹನಗಳನ್ನು ಬದಲಿ ಮಾರ್ಗಗಳಲ್ಲಿ ಸಂಚರಿಸಲು ಪ್ರಬಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಆದೇಶ ಹೊರಡಿಸಿದ್ದಾರೆ.

ಮಾರ್ಗದ ವಿವರ ಇಂತಿದೆ: ಎಂ.ಎಂ. ವೃತ್ತದ ಕಡೆಯಿಂದ ರೇಸ್‍ಕೋರ್ಸ್ ಕಡೆಗೆ ಹೋಗುವ ವಾಹನಗಳು ಎಂ.ಎಂ. ವೃತ್ತ, ಗೌಳಿಬೀದಿ ಮೂಲಕ ಸಂಚರಿಸುವದು. ರೇಸ್‍ಕೋರ್ಸ್ ಕಡೆಯಿಂದ ಎಂ.ಎಂ. ವೃತ್ತದ ಕಡೆಗೆ ಬರುವ ವಾಹನಗಳು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದ ಮೂಲಕ ಎಂ.ಎಂ. ವೃತ್ತದ ಕಡೆಗೆ ಸಂಚರಿಸುವದು.

ಈ ಬಗ್ಗೆ ಮೋಟಾರ್ ವಾಹನ ಕಾಯ್ದೆ 1988ರ ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮ 1989ರ (ತಿದ್ದುಪಡಿ ನಿಯಮ 1990) ನಿಯಮ 221ಎ (2)ರಂತೆ ಅವಶ್ಯವಿರುವ ಸಂಜ್ಞೆ/ ಸೂಚನಾ ಫಲಕವನ್ನು ಅಳವಡಿಸಲು ಜಿಲ್ಲಾ ಪೆÇಲೀಸ್ ಅದಿsೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ನಿರ್ದೇಶನ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.