ಕೂಡಿಗೆ, ಜ. 11: ಜಿಲ್ಲೆಯಲ್ಲಿ ಪ್ರಮುಖವಾಗಿ ಹೆಚ್ಚು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಕೂಡಿಗೆಯ ಕೃಷಿ ಕ್ಷೇತ್ರಕ್ಕೆ ತೆರಳುವ ಮುಖ್ಯರಸ್ತೆಯನ್ನು ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೃಷಿ ಕ್ಷೇತ್ರದ ಆವರಣವು 380 ಹೆಕ್ಟೇರ್ ಪ್ರದೇಶ ಹೊಂದಿದ್ದು, ಇದರಲ್ಲಿ ಪ್ರತಿಷ್ಠಿತ ಕೊಡಗು ಸೈನಿಕ ಶಾಲೆ, ಕ್ರೀಡಾ ಶಾಲೆ, ಮೊರಾರ್ಜಿ ಶಾಲೆ, ಡಯಟ್ ಸೇರಿದಂತೆ ರಾಜ್ಯಮಟ್ಟದ ಶಾಲೆಗಳು ಹಾಗೂ ಜಿ.ಪಂ. ಅಧೀನಕ್ಕೆ ಬರುವ ಹತ್ತಕ್ಕೂ ಹೆಚ್ಚು ಇಲಾಖೆಗಳು ಈ ಕ್ಷೇತ್ರದಲ್ಲಿವೆ. ದಿನಂಪ್ರತಿ ಸಾವಿರಾರು ಸಾರ್ವಜನಿಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತಿರುಗಾಡುವ ರಸ್ತೆಯಾಗಿದ್ದು, ರಸ್ತೆ ಸಂಪೂರ್ಣ ಹದಗೆಟ್ಟಿರುವದರಿಂದ ತಿರುಗಾಡಲು ಯೋಗ್ಯವಿಲ್ಲದಂತಾಗಿದೆ.

ಸಂಬಂಧಪಟ್ಟ ಜಿ.ಪಂ. ಹಾಗೂ ಲೋಕೋಪಯೋಗಿ ಇಲಾಖೆ ರಸ್ತೆಯನ್ನು ದುರಸ್ತಿಪಡಿಸುವಂತೆ ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.