ಕುಶಾಲನಗರ, ಜ. 11: ಕುಶಾಲನಗರ ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮ ಸಮಾಜದ ಆವರಣದಲ್ಲಿ ನಡೆಯಿತು. ಸಮಾಜದ ಅಧ್ಯಕ್ಷೆ ಸಲೀನ ಡಿ ಕುನ್ನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾರ್ಷಿಕೋತ್ಸವ ಅಂಗವಾಗಿ ಸಮಾಜದ ಶಿಶು ವಿಹಾರದ ಮಕ್ಕಳಿಗೆ ಛದ್ಮವೇಷ ಮತ್ತು ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಪೋಷಕರಿಗೆ ಪಾಸಿಂಗ್ ದ ಬಾಲ್, ಮ್ಯೂಸಿಕಲ್ ಚೇರ್ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಸಮಾಜದ ಉಪಾಧ್ಯಕ್ಷೆ ಸುಶೀಲಾ, ನಿರ್ದೇಶಕರುಗಳಾದ ಟಿ.ಕೆ. ಅಜಿತಕುಮಾರಿ, ಕಮಲಾ ಗಣಪತಿ, ಕಾವೇರಿ ಕಾಳಪ್ಪ, ಟಿ.ಪಿ. ಜಯ, ಹೆಚ್.ಎಂ. ಜಯಮ್ಮ, ನಳಿನಿ ನಂಜಪ್ಪ, ಯಶೋಧಮ್ಮ, ಎನ್.ಎ. ಸುಶೀಲಾ, ಎಂ.ಎಂ. ಆಯಿಷಾ, ನಿರ್ಮಲ ಶಿವದಾಸ್, ಹೆಚ್.ಡಿ. ಕಮಲಮ್ಮ, ಕಾರ್ಯದರ್ಶಿ ಶೈಲಕುಮಾರಿ ಇದ್ದರು.