ಮಡಿಕೇರಿ, ಜ. 11: ಕೊಡಗು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ ವಿಳಾಸ hಣಣಠಿ://ಞoಜಚಿgu-vಚಿ.ಞಚಿಡಿ.ಟಿiಛಿ.iಟಿ ನಲ್ಲಿ ಅಳವಡಿಸಲಾಗಿದೆ. ಅರ್ಜಿಗಳು ತಾ. 15 ರಿಂದ ಬೆಳಿಗ್ಗೆ 10 ಗಂಟೆಯಿಂದ ಈ ವೆಬ್‍ಸೈಟ್‍ನಲ್ಲಿ ಚಾಲನೆಯಲ್ಲಿರುತ್ತದೆ. ಅರ್ಜಿಗಳನ್ನು ಆನ್‍ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವದಿಲ್ಲ. ಅರ್ಜಿಗಳನ್ನು ಆನ್‍ಲೈನಲ್ಲಿ ಫೆಬ್ರವರಿ 14 ರ ಸಂಜೆ 5.30 ರೊಳಗೆ ಸಲ್ಲಿಸತಕ್ಕದ್ದು. ಅರ್ಜಿ ಶುಲ್ಕವನ್ನು ಬ್ಯಾಂಕ್‍ಗೆ ಪಾವತಿ ಮಾಡಲು ಫೆಬ್ರವರಿ 16 ಕೊನೆಯ ದಿನವಾಗಿದೆ. ಮೀಸಲಾತಿ, ಅರ್ಜಿ ಶುಲ್ಕ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಅರ್ಹತಾ ಷರತ್ತು ಇತ್ಯಾದಿ ವಿವರಗಳಿಗಾಗಿ ವೆಬ್‍ಸೈಟ್: ತಿತಿತಿ.ಞoಜಚಿgu.ಟಿiಛಿ.iಟಿ ಅಥವಾ hಣಣಠಿ://ಞoಜಚಿgu-vಚಿ.ಞಚಿಡಿ.ಟಿiಛಿ.iಟಿ ನಲ್ಲಿ ಅಳವಡಿಸಲಾಗಿರುವ ಅಧಿಸೂಚನೆಯನ್ನು ಗಮನಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.