ಗೋಣಿಕೊಪ್ಪಲು. ಜ. 10: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ದಿಢೀರ್ ಏಕ ಮುಖ ಸಂಚಾರದಿಂದ ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿರುವದನ್ನು ಮನಗಂಡು ಗೋಣಿಕೊಪ್ಪಲುವಿನ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಒಂದು ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು.ಇತ್ತೀಚೆಗೆ ನಗರದಲ್ಲಿ ಅವೈಜ್ಞಾನಿಕವಾಗಿ ಏಕ ಮುಖ ಸಂಚಾರ ಆರಂಭಿಸಿದ್ದರಿಂದ ಗೋಣಿಕೊಪ್ಪ ಮುಖ್ಯ ರಸ್ತೆ ಹಾಗೂ ಬೈಪಾಸ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹೊಟೇಲ್ ಹಾಗೂ ಅಂಗಡಿಗಳಿಗೆ ವ್ಯಾಪಾರವಿಲ್ಲದೆ ಗೋಣಿಕೊಪ್ಪಲು. ಜ. 10: ವಾಣಿಜ್ಯ ನಗರ ಗೋಣಿಕೊಪ್ಪಲು ವಿನಲ್ಲಿ ದಿಢೀರ್ ಏಕ ಮುಖ ಸಂಚಾರದಿಂದ ವರ್ತಕರಿಗೆ ವ್ಯಾಪಾರವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿರುವದನ್ನು ಮನಗಂಡು ಗೋಣಿಕೊಪ್ಪಲುವಿನ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಒಂದು ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು.
ಇತ್ತೀಚೆಗೆ ನಗರದಲ್ಲಿ ಅವೈಜ್ಞಾನಿಕವಾಗಿ ಏಕ ಮುಖ ಸಂಚಾರ ಆರಂಭಿಸಿದ್ದರಿಂದ ಗೋಣಿಕೊಪ್ಪ ಮುಖ್ಯ ರಸ್ತೆ ಹಾಗೂ ಬೈಪಾಸ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಹೊಟೇಲ್ ಹಾಗೂ ಅಂಗಡಿಗಳಿಗೆ ವ್ಯಾಪಾರವಿಲ್ಲದೆ ವರ್ತಕರು ಬಾಡಿಗೆ ಕಟ್ಟಲಾಗದೆ, ತರಕಾರಿ ವ್ಯಾಪಾರಸ್ಥರು ತರಕಾರಿ ವ್ಯಾಪಾರವಿಲ್ಲದೆ ಬೀದಿಗೆ ಎಸೆಯುವ ಪರಿಸ್ಥಿತಿ ಹಾಗೂ ಹೊಟೇಲ್‍ಗಳಲ್ಲಿ ಮಾಡಿರುವ ಆಹಾರ ತಿನಿಸುಗಳು ಗ್ರಾಹಕರಿಲ್ಲದೆ. ಬಿಸಾಕುವ ಪರಿಸ್ಥಿತಿ ಬಂದೊದಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಇನ್ನೂ ಕೂಡ ನಿದ್ರಾವಸ್ಥೆಯಲ್ಲಿದೆ. ಇಲ್ಲಿಯ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೋರಾಟಗಾರ ಮಚ್ಚಮಾಡ ಅನೀಶ್ ಆಕ್ರೋಶ ಹೊರ ಹಾಕಿದರು.
ಚಿನ್ನ ಬೆಳ್ಳಿ ವರ್ತಕರ ಸಂಘದ ಗೌರವ ಅಧ್ಯಕ್ಷ ಎಂ.ಜಿ. ಮೋಹನ್ ಮಾತನಾಡಿ ಗೋಣಿಕೊಪ್ಪ ಮುಖ್ಯ ರಸ್ತೆಯು
(ಮೊದಲ ಪುಟದಿಂದ) ಬೇರೆಡೆಗಿಂತ ವಿಸ್ತಾರವಾಗಿದೆ. ವಾಹನ ದಟ್ಟಣೆ ಇದ್ದರೂ ಟ್ರಾಫಿಕ್ ವ್ಯವಸ್ಥೆ ಸರಿ ಇದ್ದಲ್ಲಿ ಸರಿದೂಗಿಸಬಹುದು. ಇಲ್ಲಿಯವರೆಗೂ ಈ ರೀತಿಯ ಸಮಸ್ಯೆ ಎದುರಾಗಿರಲಿಲ್ಲ. ಇದರಿಂದ ಮುಂದೆ ವರ್ತಕರು ಬೀದಿಗೆ ಬರುವ ಸಂಭವವಿದೆ. ಆದ್ದರಿಂದ ಈ ಹಿಂದಿನ ರೀತಿಯಲ್ಲಿಯೇ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಜಮಾಹತ್ ಇಸ್ಲಾಮಿ ಹಿಂದ್ ಸಂಘಟಣೆಯ ಮುಖಂಡರಾದ ಚಡ್‍ಖಾನ್ ರಫೀ ಮಾತನಾಡಿ ಯಾವದೆ ರೀತಿಯ ಮುಂಜಾಗೃತ ಕ್ರಮ ಕೈಗೊಳ್ಳದೇ ಏಕ ಮುಖ ಸಂಚಾರ ಮಾಡಿರುವದು ದುರಂತ ಎಂದರು.
ಪೊನ್ನಂಪೇಟೆ ಜಂಕ್ಷನ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ ವ್ಯವಸ್ಥೆಯ ಬಗ್ಗೆ ಪ್ರತಿಭಟಿಸಿದ ವರ್ತಕರು ನಂತರ ಮೆರವಣಿಗೆಯಲ್ಲಿ ಉಮಾಮಹೇಶ್ವರಿ ದೇವಸ್ಥಾನದವರೆಗೂ ಸಾಗಿದರು. ಪ್ರತಿಭಟನೆಯಲ್ಲಿ ಛೇಂಬರ್‍ನ ಕಾರ್ಯದರ್ಶಿ ತೆಕ್ಕಡ ಕಾಶಿ, ಗ್ರಾಮ ಪಂಚಾಯಿತಿ ಸದಸ್ಯ ಮುರುಗ, ಹಿರಿಯ ವರ್ತಕ ಪಿ.ಕೆ. ಪ್ರವೀಣ್, ಚಿನ್ನ ಬೆಳ್ಳಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ಪ್ರಶಾಂತ್, ಗೋಣಿಕೊಪ್ಪ ಅಧ್ಯಕ್ಷ ಗಜಾನನ ಶೇಠ್, ವರ್ತಕರಾದ ಪ್ರಮೋದ್, ಎಸ್.ಬಿ.ಹರೀಶ್, ಮೊಹಮ್ಮದ್ ಮುಂತಾದವರು ಹಾಜರಿದ್ದರು. ಕೆಲ ಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು. ವರ್ತಕರೆಲ್ಲರೂ ಅಂಗಡಿ ಮುಂಗಟ್ಟು ಮುಚ್ಚುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪೊಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.
ಗೋಣಿಕೊಪ್ಪ ವರದಿ : ಪಟ್ಟಣದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿರುವ ಏಕಮುಖ ಸಂಚಾರ ನಿಯಮವನ್ನು ರದ್ದುಗೊಳಿಸಿ ಹಿಂದಿನಂತೆ ಯಥಾಸ್ಥಿತಿ ನಿಯಮ ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆಗೆ 5 ದಿನ ಗಡುವು ನೀಡುತ್ತಿದ್ದು, ತಪ್ಪಿದಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆಸುವದಾಗಿ ಸ್ಥಳೀಯ ವರ್ತಕ ಮಚ್ಚಮಾಡ ಅನೀಶ್ ಮಾದಪ್ಪ ಎಚ್ಚರಿಸಿದ್ದಾರೆ.
ವರ್ತಕರುಗಳು ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದಾರೆ. ಮುಖ್ಯರಸ್ತೆಯಲ್ಲಿ ಪಾರ್ಕಿಂಗ್‍ಗೆ ಸಾಕಷ್ಟು ಜಾಗವಿದೆ. ಆದ್ದರಿಂದಾಗಿ ಹಿಂದಿನಂತೆಯೆ ಸಂಚಾರ ನಿಯಮ ಜಾರಿಗೆ ತರಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪಟ್ಟಣದ ಎಲ್ಲಾ ವರ್ತಕರು ಒಂದಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. 5 ದಿನಗಳಲ್ಲಿ ಹಿಂದಿನಂತೆಯೆ ನಿಯಮ ಜಾರಿಗೆ ತರಬೇಕು. ತಪ್ಪಿದಲ್ಲಿ ಬಂದ್ ನಡೆಸಿ, ಪ್ರತಿಭಟಿಸಲಾಗವದು. ಸ್ಥಳೀಯ ವರ್ತಕರ ಸಂಘದಲ್ಲಿ ಏಕಮುಖ ಸಂಚಾರದ ಬಗ್ಗೆ ಚರ್ಚೆ ನಡೆದಿಲ್ಲ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಬಗ್ಗೆ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಹಿಂದಿನಂತೆಯೆ ಅನುಷ್ಠಾನಗೊಳಿಸುವಂತೆ ಕೋರಿಕೊಳ್ಳಲಾಗಿದೆ ಎಂದರು. ಗೋಷ್ಠಿಯಲ್ಲಿ ವರ್ತಕರುಗಳಾದ ಪ್ರಮೋದ್, ರಫಿಕ್, ಮದು ಉಪಸ್ಥಿತರಿದ್ದರು.
- ಹೆಚ್.ಕೆ.ಜಗದೀಶ್, ಕಿಶೋರ್ ನಾಚಪ್ಪ.