ಕುಶಾಲನಗರ, ಜ.10: ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಕೃತಿ ವಿಕೋಪದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಭಾರೀ ಗಾತ್ರದ ಎರಡು ಹಾವುಗಳು ಎದುರಾಗಿ ಸ್ವಲ್ಪ ಕಾಲ ಎಲ್ಲರನ್ನು ಚಕಿತಗೊಳಿಸಿದ ಘಟನೆ ನಡೆಯಿತು.
ಮಡಿಕೇರಿಯ ಉದಯಗಿರಿ ಬಳಿ ಕಾರಿನಿಂದ ಇಳಿದ ಧರ್ಮಾಧಿಕಾರಿಗಳು ಮತ್ತು ಯೋಜನೆಯ ಅಧಿಕಾರಿಗಳು ಮುಂದೆ ಸಾಗುವಾಗ ಹಾವುಗಳು ಕಂಡುಬಂದವು. ಈ ಹಾವುಗಳು ಸ್ವಲ್ಪ ಕಾಲ ಅಡ್ಡಿ ಮಾಡಿದಂತೆ ಭಾಸವಾಯಿತು. ಈ ಸಂದರ್ಭ ಹೆಗ್ಗಡೆಯವರು ತಮ್ಮ ಕಾರಿನಿಂದ ಕ್ಯಾಮೆರಾ ತೆಗೆದುಕೊಂಡು ಹಾವುಗಳ ಫೋಟೊ ಕ್ಲಿಕ್ಕಿಸಿದ ದೃಶ್ಯವೂ ಗೋಚರಿಸಿತು.
ಸ್ವಲ್ಪಕಾಲ ಕಾದು ಹಾವುಗಳು ಸ್ಥಳದಿಂದ ತೆರಳಿದ ನಂತರ ಪ್ರಕೃತಿ ವಿಕೋಪದ ಸ್ಥಳಕ್ಕೆ ಹೆಗ್ಗಡೆಯವರು ತೆರಳಿದರು.