ಗೋಣಿಕೊಪ್ಪ ವರದಿ, ಜ, 10 : ಇಲ್ಲಿನ ಕಾವೇರಿ ಕಾಲೇಜು ಸ್ನಾತಕೋತ್ತರ ವಿಭಾಗದ ದ್ವಿತೀಯ ಎಂ. ಕಾಂ ವಿದ್ಯಾರ್ಥಿನಿ ಎಂ. ಶಾಲಿನಿ ಅವರಿಗೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ಮಾಡುವ ಮೂಲಕ ವಿಶೇಷತೆಗೆ ಕಾರಣವಾಯಿತು.

ಶಾಲಿನಿ, ಇದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಇತ್ತೀಚೆಗಷ್ಟೆ ಸೆಮಿಸ್ಟರ್ ಪರೀಕ್ಷೆ ಬರೆದಿದ್ದ ಶಾಲಿನಿಗೆ 9 ತಿಂಗಳು ಪೂರೈಸಿರುವದರಿಂದ ಸೀಮಂತ ಶಾಸ್ತ್ರ ಮಾಡಲಾಯಿತು.

ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಬೋಧಕ ವೃಂದ, ಹಾಗೂ ಸಿಬ್ಬಂದಿ ಪಾಲ್ಗೊಂಡರು. ಪ್ರಾಂಶುಪಾಲ ಎಸ್. ಆರ್. ಉಷಾಲತಾ, ಎಂ.ಕಾಂ. ವಿಭಾಗದ ಮುಖ್ಯಸ್ಥೆ ಡಾ. ಬೀನಾ, ಬೋಧಕರುಗಳಾದ ಮುದ್ದಪ್ಪ, ನಿತ್ಯಾ, ನಿರ್ಮಲ ಪಾಲ್ಗೊಂಡಿದ್ದರು.