ಸಿದ್ದಾಪುರ, ಜ. 10: ಬೆಂಗಳೂರಿನ ರೋಟರಿ ಸೌತ್ ವೆಸ್ಟ್ ಕ್ಲಬ್ ಹಾಗೂ ವಾಸವಿ ಇಂಟರ್‍ನ್ಯಾಷನಲ್ ಕ್ಲಬ್ ವತಿಯಿಂದ ಸಿದ್ದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಂಪ್ಯೂಟರ್ ಕೊಠಡಿ ನವೀಕರಣ ಹಾಗೂ ಶೌಚಾಲಯ ಮತ್ತು ತಡೆಗೋಡೆ ನಿರ್ಮಾಣ ಸೇರಿದಂತೆ ರೂ. 5 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ಕ್ಲಬ್ ವತಿಯಿಂದ ನಿರ್ಮಾಣ ಮಾಡಿಕೊಡಲಾಯಿತು. ಕಾರ್ಯಕ್ರಮವನ್ನು ಬೆಂಗಳೂರಿನ ರೋಟರಿ ಸೌತ್ ವೆಸ್ಟ್ ಕ್ಲಬ್‍ನ ಅಧ್ಯಕ್ಷ ಬಿ.ಎನ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‍ನ ಪದಾಧಿಕಾರಿಗಳಾದ ಪ್ರಿಯಾ, ಎಸ್.ಕೆ. ಭಗವಾನ್, ಪರೇಸ್ ಮಾಸ್ಟರ್, ಕುಶಾಲನಗರದ ಕ್ರಿಸ್ಟೆಲ್ ಕೊಟ್ರೆ, ಪ್ರೇಮ್‍ಚಂದ್ರ, ಧರ್ಮಪಾನಿ ನಾರಾಯಣ, ಮುಖ್ಯೋಪಾಧ್ಯಾಯಿನಿ ಪ್ರೇಮ್ ಕುಮಾರಿ ಇತರರು ಹಾಜರಿದ್ದರು.