ಗುಡ್ಡೆಹೊಸೂರು, ಜ. 9: ಇಲ್ಲಿನ ಐ.ಎನ್.ಎಸ್ ಸಂಸ್ಥೆಯ ವತಿಯಿಂದ ಕ್ರಿಕೆಟ್ ಆಟಗಾರರ ಆಯ್ಕೆ ನಡೆಸಲಾಗುತ್ತಿದೆ. ಈ ಸಂಸ್ಥೆಯ ತಂಡವನ್ನು ಕೆ.ಎಸ್.ಸಿ.ಎ ಮಂಗಳೂರು ವಲಯದವರು ನೊಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಉತ್ತಮ ಆಟಗಾರರನ್ನು ಗುರುತಿಸಿ ಅವರನ್ನು ಸೂಕ್ತ ತರಬೇತಿಯೊಂದಿಗೆ ಡಿವಿಜನ್ ಮಟ್ಟದಲ್ಲಿ ಅವರ ಪ್ರತಿಭೆಗಳನ್ನು ಆನಾವರಣಗೊಳಿಸುವದು ಇದರ ಉದ್ದೇಶವಾಗಿದೆ. ಈ ಪ್ರಯುಕ್ತ ಜನವರಿ 13, 14 ಮತ್ತು 15ರಂದು ಆಯ್ಕೆ ನಡೆಯಲಿದೆ 19 ವರ್ಷದೊಳಗಿನ ಆಟಗಾರರು ತಮ್ಮ ಗುರುತಿನ ಚೀಟಿಯೊಂದಿಗೆ ಸಂಸ್ಥೆಯ ಕ್ರೀಡಾಂಗಣದಲ್ಲಿ ಹಾಜರಿರುವಂತೆ ಕೋರಲಾಗಿದೆ.
ಜೊತೆಗೆ 10,12,14 ಮತ್ತು 16 ವರ್ಷದೊಳಗಿನ ಆಟಗಾರರು ತರಬೇತಿಗೆ ನೊಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ದೂರವಾಣಿ 9880578554 ಮತ್ತು 9880578554 ಈ ನಂಬರ್‍ಗೆ ಕರೆಮಾಡಬಹುದು. ತಾ. 13ರಂದು ಬೆಳಗ್ಗೆ 10.30 ಗಂಟೆಗೆ ಹಾಜರಿರಬೇಕಾಗಿದೆ.
- ಗಣೇಶ್ ಕುಡೆಕ್ಕಲ್