ಮಡಿಕೇರಿ, ಜ.9 : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರಿನ ಬಾಲಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಸೃಜನಾತ್ಮಕ ಬರೆವಣಿಗೆ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೇಫರ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಮೌನ ವಿ.ಜೆ. ಪ್ರಥಮ ಸ್ಥಾನಗಳಿಸಿ ‘ಕಲಾಶ್ರೀ’ ಪ್ರಶಸ್ತಿಗೆ ಭಾಜನಳಾಗಿದ್ದಾಳೆ .
ಮೌನ ವಿ.ಜೆ. ಸ್ಥಳದಲ್ಲಿಯೇ ಕತೆ , ಕವನ ಮತ್ತು ಪ್ರಬಂಧ ರಚಿಸಿ ಸೃಜನಶೀಲ ಬರೆವಣಿಗೆಯಲ್ಲಿ ತೋರಿದ ಅಪ್ರತಿಮ ಸಾಧನೆಗಾಗಿ ಈ ಪುರಸ್ಕಾರ ಸಂದಿದೆ . ಸಚಿವೆ ಜಯಮಾಲ , ಬಾಲಭವನ ನಿರ್ದೇಶಕಿ ರತ್ನಾ ಕಲಂದಾನಿ ಹಾಗೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ ಪ್ರಶಸ್ತಿ ಪ್ರಧಾನ ಮಾಡಿದರು. ಮೌನ ಮಡಿಕೇರಿಯ ಜಯಕುಮಾರ್ ಮತ್ತು ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರ ಪುತ್ರಿಯಾಗಿದ್ದು ಈವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ.