ವೀರಾಜಪೇಟೆ, ಜ. 9: ಜಿಲ್ಲಾ ಒಕ್ಕಲಿಗರ ಸಂಘದ 3ನೇ ವಾರ್ಷಿಕ ಮಹಾ ಸಭೆಯನ್ನು ತಾ. 13 ರಂದು ಹಾತೂರು ಪ್ರೌಢÀಶಾಲಾ ಸಭಾಂಗಣದಲ್ಲಿ ನಡೆಸಲಾಗುವದು ಎಂದು ಸಂಘದ ಜಿಲ್ಲಾ ಉಪಾಧ್ಯಕ್ಷ ಹಾಗೂ ವಕೀಲ ದೇವಲಿಂಗಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಲಿಂಗಯ್ಯ ಅವರು ಪೂರ್ವಾಹ್ನ 11 ಗಂಟೆಗೆ ಆರಂಭವಾಗಲಿರುವ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾದ್ಯಕ್ಷ ಎಸ್.ಎಂ ಚಂಗಪ್ಪ ವಹಿಸಲಿದ್ದಾರೆ. ಸುಮಾರು 5 ಸಾವಿರ ಸದಸ್ಯರನ್ನು ಹೊಂದಿರುವ ಸಂಘದಲ್ಲಿ ರೂ 28 ಲಕ್ಷ ಹಣ ಉಳಿತಾಯ ಖಾತೆಯಲ್ಲಿದೆ. ಮುಂದಿನ ದಿನಗಳಲ್ಲಿ ಕೊಡಗಿನ ಆಯ್ದ ಭಾಗದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಸಂಘದ ತಾಲೂಕು ಅಧ್ಯಕ್ಷ ಕೆ.ಪಿ ನಾಗರಾಜ್ ಮಾತನಾಡಿ ನಮ್ಮ ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಜಾಗದ ವ್ಯವಸ್ಥೆಗಾಗಿ ಮನವಿ ಸಲ್ಲಿಸಲಾಗುವದು. ಮಹಾಸಭೆಯಲ್ಲಿ ನಮ್ಮ ಜನಾಂಗದಲ್ಲಿ ಉತ್ತಮ ಸಾಧನೆ ಮಾಡಿ ಅಂತರಾಷ್ಟ್ರಿಯ ಹಾಕಿ ಆಟಗಾರ ವಿ.ಎಸ್ ವಿನಯ್, ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ರಿಲೇ ಓಟದಲ್ಲಿ ಬೆಳ್ಳಿಪದಕ ಪಡೆದುಕೊಂಡ ಸೋಮವಾರಪೇಟೆಯ ಕೆ.ಎಸ್ ಜಗದೀಶ್, ಸಿನಿಮಾರಂಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಿತ್ರ ನಟ ಜ್ಯೆಜಗದೀಶ್ ಹಾಗೂ ಈ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಉತ್ತೇಜನ ನೀಡಲಾಗುವದು ಎಂದರು. ಗೋಷ್ಠಿಯಲ್ಲಿ ಸಂಘಟನೆಯ ವಿ.ಎಲ್. ಸುರೇಶ್, ಕೆ.ಆರ್.ಸತೀಶ್, ವಿ.ಪಿ.ರಾಜ ಹಾಜರಿದ್ದರು.