ಕೂಡಿಗೆ, ಜ. 9: ಕೂಡುಮಂಗಳೂರು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತ್ತೂರು, ದೂಡ್ಡತ್ತೊರು, ಆನೆಕರೆ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ 10ಕ್ಕೂ ಹೆಚ್ಚು ಹಸುಗಳು ಕಳವು ಅಗಿರುವ ಘಟನೆ ನಡೆದಿದೆ. ಪ್ರದೇಶದ ರೈತರು ತಮ್ಮ ಹಸುಗಳನ್ನು ಸಮೀಪದ ಬಯಲು ಪ್ರದೇಶದಲ್ಲಿ ಮೇಯಲು ಬಿಡುತ್ತಿದ್ದರು. ಅನೇಕ ಹಸುಗಳು ಕೃಷಿ ಇಲಾಖೆಯ ಖಾಲಿ ಜಾಗದಲ್ಲಿ ಮೇಯುತ್ತಿದವು. ಅದರೆ ಕಳೆದ ಒಂದು ವಾರದಿಂದ ಚಿಕ್ಕತ್ತೂರು ಗ್ರಾಮದ ದೀಪಕ ಅವರ 3 ಹಸುಗಳು, ದೇವಮ್ಮನವರಿಗೆ ಸೇರಿದ 4 ಹಸುಗಳು, ಭಾಗ್ಯಮ್ಮನವರದು ಒಂದು, ಪುಟ್ಟಣ್ಣಯ್ಯ ನವರದು ಒಂದು ಹಸುಗಳು ಕಾಣೆಯಾಗಿವೆ.
ಈ ಭಾಗಗಳಲ್ಲಿ ಕಳೆದ ಒಂದು ತಿಂಗಳಿಂದ ಈ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಸುಗಳು ಕಾಣೆಯಾಗಿವೆ. ಈ ಹಸುಗಳು 25 ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತವೆ. ಈ ವ್ಯಾಪ್ತಿಯ ಗ್ರಾಮಸ್ಥರು ಹಸುಗಳು ಕಾಣೆಯಾಗುತ್ತಿರವದರಿಂದ ಅತಂಕದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.