ಸಿದ್ದಾಪುರ, ಜ. 9: ಸಮೀಪದ ಗುಹ್ಯ ಗ್ರಾಮದ ಗೂಡುಗದ್ದೆ ಅಯ್ಯಪ್ಪ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಕಿಡಿಗೇಡಿಗಳು ದನ ಮಾಂಸದ ತ್ಯಾಜ್ಯ ಬಿಸಾಡಿದ್ದಾರೆ.
ದನದ ಕಾಲು, ಚರ್ಮ ಮೂಳೆ ಒಳಗೊಂಡ ತ್ಯಾಜವನ್ನು ಚೀಲದಲ್ಲಿ ಕಟ್ಟಿ ನದಿಗೆ ಹಾಕಲಾಗಿದ್ದು ನದಿಯಲ್ಲಿ ಚೀಲ ತೇಲುವದನ್ನು ಗಮನಿಸಿದ ಸ್ಥಳೀಯರು ಚೀಲ ಬಿಚ್ಚಿ ನೋಡಿದಾಗ ದನ ಮಾಂಸದ ತ್ಯಾಜ್ಯವಿರುವದು ತಿಳಿದಿದೆ.
ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೂಡುಗದ್ದೆ, ನೆಲ್ಯಹುದಿಕೇರಿ ಸೇರಿದಂತೆ ಸಿದ್ದಾಪುರ ಭಾಗದಲ್ಲಿ ಗೋಮಾಂಸ ಮಾರಾಟ ಅಧಿಕವಾಗಿದ್ದು ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ. ಎಂದು ಸ್ಥಳೀಯರು ಆರೋಪಿಸಿದ್ದು, ದೇವಾಲಯದ ಸಮೀಪ ದನ ಮಾಂಸ ತ್ಯಾಜ ಹಾಕಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕೆಂದು ದೇವಾಲಯ ಆಡಳಿತ ಮಂಡಳಿ ಒತ್ತಾಯಿಸಿದೆ.