ಮಡಿಕೇರಿ, ಜ. 9: ಕೊಡಗು ಜಿಲ್ಲೆಯಲ್ಲಿ 2018-19ನೇ ಸಾಲಿಗೆ ಪಿ.ಎಂ.ಇ.ಜಿ.ಪಿ. ಮತ್ತು ಸಿ.ಎಂ.ಇ.ಜಿ.ಪಿ. ಯೋಜನೆಯಡಿ ತಾ. 8 ರಂದು ಸಂದರ್ಶನ ಏರ್ಪಡಿಸಿದ್ದು, ಈ ದಿನದಂದು ಮುಷ್ಕರದ ಪ್ರಯುಕ್ತ ಸಂದರ್ಶನಕ್ಕೆ ಹಾಜರಾಗಲು ಅನಾನುಕೂಲವಾದ ಕಾರಣ ಅಭ್ಯರ್ಥಿಗಳಿಗೆ ತಾ. 11 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿ ಸಭಾಂಗಣದಲ್ಲಿ ಮರು ಸಂದರ್ಶನವನ್ನು ಏರ್ಪಡಿಸಲಾಗಿದೆ. ಇದು ಕೊನೆಯ ಸಂದರ್ಶನವಾಗಿದ್ದು, ಅಭ್ಯರ್ಥಿಗಳು ಸಂದರ್ಶನಕ್ಕೆ ತಪ್ಪದೇ ಹಾಜರಾಗುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಕೋರಿದ್ದಾರೆ.