ಮಡಿಕೇರಿ, ಜ. 7: ಪ್ರಸಕ್ತ (2018-19) ಸಾಲಿಗೆ ರೈತರಿಂದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‍ಗೆ ರೂ.1750 ರ ದರದಲ್ಲಿ ಸಾಮಾನ್ಯ ಭತ್ತವನ್ನು ಮತ್ತು ರೂ.1,770 ರ ದರದಲ್ಲಿ ‘ಎ’ ಗ್ರೇಡ್ ಭತ್ತವನ್ನು ಖರೀದಿಸಲು ಆದೇಶ ನೀಡಲಾಗಿದೆ.
ಸರ್ಕಾರದ ಮಾರ್ಪಾಡು ಆದೇಶದಲ್ಲಿ ರೈತರ ಹಿತದೃಷ್ಟಿಯಿಂದ ರೈತರ ನೋಂದಣಿ ಅವಧಿಯನ್ನು ಫೆಬ್ರವರಿ, 28 ರವರೆಗೆ ವಿಸ್ತರಿಸಲಾಗಿದೆ. ರೈತರು ನಿಗಧಿತ ಅವಧಿಯೊಳಗೆ ಸೋಮವಾರಪೇಟೆ ತಾಲೂಕು ಕುಶಾಲನಗರ ಎಪಿಎಂಸಿ, ವೀರಾಜಪೇಟೆ ತಾಲೂಕು ಗೋಣಿಕೊಪ್ಪ ಎಪಿಎಂಸಿ ಮತ್ತು ಮಡಿಕೇರಿ ತಾಲೂಕು ಎಪಿಎಂಸಿ ನೋಂದಣಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಎಸ್. ಸದಾಶಿವಯ್ಯ ಅವರು ಕೋರಿದ್ದಾರೆ.