ನಾಪೆÇೀಕ್ಲು, ಜ. 7: ಕೊಡವ ಕುಲ ಶಾಸ್ತ್ರ ಅಧ್ಯಯನಕ್ಕೆ ನಿರ್ದೇಶನ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆದೇಶ ನೀಡಿದ ರಾಜ್ಯದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಅವರ ಪ್ರಯತ್ನವನ್ನು ನಾಪೆÉÇೀಕ್ಲು ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ಲಾಘಿಸುವದಾಗಿ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಹೇಳಿದರು.
ಕೊಡವ ಸಮಾಜದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡವ ನ್ಯಾಷನಲ್ ಕೌನ್ಸಿಲ್‍ನ 28 ವರ್ಷಗಳ ದೀರ್ಘ ಹೋರಾಟದಲ್ಲಿ ಸುಮಾರು 15 ವರ್ಷಗಳ ಕಾಲ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಸಂರಕ್ಷಿಸಬೇಕೆಂಬ ಹಕ್ಕೊತ್ತಾಯವನ್ನು ಮೀಸಲಿಟ್ಟು ಆಂದೋಲನ ರೂಪಿಸಿ ಜ್ಞಾಪನಾ ಪತ್ರ, ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದ ಹಿನ್ನೆಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ‘ಕೊಡವರ ಕುಲಶಾಸ್ತ್ರ’ ಅಧ್ಯಯನ ನಿದೆರ್Éೀಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.
ಸರ್ಕಾರದ ವತಿಯಿಂದ ನಡೆಯುವ ಕುಲಶಾಸ್ತ್ರ ಸಮೀಕ್ಷಾ ಕಾರ್ಯಕ್ಕೆ ನಾವು ಸಂಪೂರ್ಣ ಸಹಕಾರ ನೀಡುವದಲ್ಲದೆ, ಸಮಗ್ರ ಕೊಡವರು ಇದಕ್ಕೆ ಸಹಕರಿಸಬೇಕಾಗಿ ವಿನಂತಿಸಿದರು.
ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರ್ಪಡೆಗೊಳಿಸಿ ಭದ್ರತೆ ಪಡೆಯಬೇಕೆಂದು ಪ್ರತಿಯೊಬ್ಬ ಕೊಡವರ ಅಂತರಾಳದ ಅಭಿಲಾಷೆಯಾಗಿದೆ. ನಮ್ಮ ಭೂಮಿ, ಭಾಷೆ, ಆರ್ಥಿಕ ಸ್ವಾವಲಂಬನೆ, ರಾಜಕೀಯ ಸ್ವಾತಂತ್ರ್ಯ, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭದ್ರತೆ ದೊರೆಯಲು ಸಾಧ್ಯವಾಗಲಿರುವ ಬುಡಕಟ್ಟು ಸ್ಥಾನಮಾನ ಕೊಡವರಿಗೆ ಅತ್ಯಂತ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ, ನಿರ್ದೇಶಕರಾದ ಚೋಕಿರ ಸಜೀತ್, ಕಾಟುಮಣಿಯಂಡ ಉಮೇಶ್, ಕುಂಡ್ಯೋಳಂಡ ವಿಶೂ ಪೂವಯ್ಯ, ಕುಲ್ಲೇಟಿರ ಅಜೀತ್ ನಾಣಯ್ಯ, ಕೊಡವ ಸಮಾಜದ ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಇದ್ದರು.